ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಕನ್ನಡ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಸಭೆ ನಡೆದಿದ್ದು, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಇದನ್ನು ಮಾಡಲು ಫೆ.28 ಕಡೆಯ ದಿನಾಂಕ ಎಂದು ಘೋಷಿಸಲಾಗಿದೆ.
ಅಂಗಡಿಗಳ ಬೋರ್ಡ್ ಬದಲಾವಣೆಗೆ ಸಮಯ ನೀಡಲಾಗಿದ್ದು, ಬೋರ್ಡ್‌ನಲ್ಲಿ ಶೇ. 60ರಷ್ಟು ಕನ್ನಡ ಇರಲೇಬೇಕಿದೆ. ಜಾಹೀರಾತುಗಳು ಕೂಡ ಸರ್ಕಾರದ ಈ ನಿಯಮ ಪಾಲನೆಯಾಗಬೇಕಿದೆ ಎಂದು ಸಿಎಂ ಹೇಳಿದ್ದಾರೆ.
ಈ ಹಿಂದೆ ನಾಮಫಲಕಗಳು ಶೇ.50%ರಷ್ಟು ಕನ್ನಡದಲ್ಲೇ ಇರಬೇಕು ಎಂದು ಹೇಳಲಾಗಿತ್ತು. ಇದೀಗ ಇದನ್ನು ಶೇ.60ರಷ್ಟು ಮಾಡಲಾಗಿದೆ. ಫೆ.28ರೊಳಗೆ ಬೋರ್ಡ್ ಬದಲಾವಣೆ ಮಾಡಬೇಕು. ಇನ್ನೂ ವಿಳಂಬ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.