ನಾವು 6,279 ಕೋಟಿ ರೂ. ಸಾಲ ನೀಡಿದ್ದೇವೆ: ಸಿದ್ದರಾಮಯ್ಯ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ಕುರಿತ ಪ್ರತಿಭಟನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಡಾಮಂಡಲವಾಗಿದ್ದು, ಕರ್ನಾಟಕ ಸರ್ಕಾರ ಮಾಡಿದ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕಿತ್ತು ಎನ್ನುವುದು ಶುದ್ಧ ಸುಳ್ಳು. ಆ ಆಯೋಗದ ವರದಿಯಲ್ಲಿ ಯಾವುದೇ ವಿಶೇಷ ಅನುದಾನದ ಉಲ್ಲೇಖ ಮಾಡಿಲ್ಲ. ಆದರೂ, ನಾವು ಕರ್ನಾಟಕ ಸರ್ಕಾರಕ್ಕೆ 6,279 ಕೋಟಿ ರೂ. ಸಾಲವನ್ನು ನೀಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯವ 15ನೇ ಹಣಕಾಸಿನಲ್ಲಿ ವಿಶೇಷ ಹಣ ಎಂದಿದ್ದಾರೆ. ಆದರೆ, ಆ ಬಗ್ಗೆ ಆಯೋಗದ ವರದಿಯಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಆದರೂ ಸಿದ್ದರಾಮಯ್ಯ ಮಾತ್ರ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಎಂದು ಹೇಳಿರುವುದು ಸುಳ್ಳು. ನಾವು ಕರ್ನಾಟಕ ಸರ್ಕಾರಕ್ಕೆ 6,279 ಕೋಟಿ ರೂ. ಹಣವನ್ನ ಯಾವುದೇ ಬಡ್ಡಿಯಿಲ್ಲದೆ 50 ವರ್ಷಕ್ಕೆ ನೀಡಿದ್ದೇವೆ. ನಾವು ಇದನ್ನು ಕೂಡ ನೀಡಬೇಕಿರಲಿಲ್ಲ ಎಂದು ಹೇಳಿದರು.

ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ 13ನೇ ಹಣಕಾಸಿನಲ್ಲಿ 61,691 ಕೋಟಿ ರೂ. ನೀಡಲಾಗಿದೆ. 14ನೇ ಹಣಕಾಸಿನ ಅವಧಿಯಲ್ಲಿ 1,51,309 ಕೋಟಿ ರೂ. ನೀಡಲಾಗಿದೆ. 15ನೇ ಹಣಕಾಸಿನಲ್ಲಿ ಈವರೆಗೆ 2 ವರ್ಷ ಬಾಕಿ ಇರುವಾಗಲಲೇ 1,21,854 ಕೋಟಿ ರೂ. ನೀಡಲಾಗಿದೆ. ಅಂದರೆ, 15ನೇ ಹಣಕಾಸು ಮುಗಿಯುವ ವೇಳೆಗೆ 1,74,339 ಕೋಟಿ ರೂ. ನೀಡಲಾಗುತ್ತದೆ. ಆದರೆ, ಕಳೆದ UPA ಸರ್ಕಾರದ 10 ವರ್ಷದಲ್ಲಿ 81,795 ಕೋಟಿ ರೂ. ಮಾತ್ರ ನೀಡಲಾಗಿತ್ತು. ಆದರೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2,85,452 ಕೋಟಿ ರೂ. ನೀಡಲಾಗಿದೆ. ಕೇಂದ್ರ ಸರ್ಕಾರ ನೀಡಿರೋ ವಿಶೇಷ ಅನುದಾನ ನೋಡಿವುದಾದರೆ ಯುಪಿಎ ಸರ್ಕಾರ 10 ವರ್ಷದಲ್ಲಿ 60,779 ಕೋಟಿ ನೀಡಿದರೆ, ಎನ್ ಡಿಎ ಸರ್ಕಾರ 10 ವರ್ಷದಲ್ಲಿ 2,26,837 ಕೋಟಿ ರೂ. ಹಣವನ್ನು ಕೊಡಲಾಗಿದೆ ಎಂದು ತಿಳಿಸಿದರು.

ಕೇಂದ್ರದಿಂದ ಆದಾಯ ಕೊರತೆ ಗ್ರಾಂಟ್ ಕರ್ನಾಟಕಕ್ಕೆ 1,631 ಕೋಟಿ ನೀಡಲಾಗಿದೆ. ಆದರೆ, ಉತ್ತರ ಪ್ರದೇಶಕ್ಕೆ ಒಂದೇ ರೂಪಾಯಿ ಹೋಗಿಲ್ಲ. ಹಣಕಾಸು ಆಯೋಗ ಕೂಡ ಅವರಿಗೆ ಶಿಫಾರಸು ಮಾಡಿಲ್ಲ. 1996 ರಿಂದ ಕೇಂದ್ರದಲ್ಲಿ 81,476 ಕೋಟಿ ರೂ. ಹಾಗೆ ಉಳಿದಿತ್ತು. ಆಗಿನಿಂದ ಯಾರ ಸರ್ಕಾರ ದೇಶದಲ್ಲಿತ್ತು. ನಮ್ಮ ಸರ್ಕಾರ ಬಂದ ಮೇಲೆ 2671 ಕೋಟಿ ಹಣ ಕರ್ನಾಟಕಕ್ಕೆ ನೀಡಲಾಗಿದೆ. ರೈಲಿನ ದರ ನೂರು ರೂಪಾಯಿಯಲ್ಲಿ 20 ರೂಪಾಯಿ ಸಬ್ಸಿಡಿ ಸಿಗ್ತಿದೆ ಅಂದ್ರೆ ಎಲ್ಲಿಂದ, ಜನಸಾಮಾನ್ಯರ ಅಭಿವೃದ್ದಿಗೆ ಇದರ ಹಣ ಬಳಕೆಯಾಗ್ತಿದೆ ಎಂದರ್ಥ. ಕರ್ನಾಟಕದ ಜನ ಹೆಮ್ಮೆ ಪಡ್ತಿದ್ದಾರೆ. ಕರ್ನಾಟಕದ ಜನರಿಗೆ ಇದರಿಂದ ಹೆಮ್ಮೆಯಾಗ್ತಿದೆ. ಆದರೆ, ಇವರ ಹೇಳಿಕೆ ಇದು ಕಾಂಗ್ರೆಸ್ ನಾಯಕರ ಮಾತಾಗಿದೆ. ಇವರು ದೇಶ ಒಡೆಯೋ ಮಾತು, ಪರಿವಾರವಾದಿಗಳ ಮಾತಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!