ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವತಂತ್ರ ಭಾರತದಲ್ಲಿ ನಿರ್ಮಾಣಗೊಂಡ ಅತೀ ದೊಡ್ಡ ಜೈಲು ಅನ್ನೋ ಹೆಗ್ಗಳಿಕೆಯ ತಿಹಾರ್ ಜೈಲು ಈಗ ಸ್ಥಳಾಂತರ ಮಾಡಲಾಗುತ್ತಿದೆ.
ಅಪರಾಧಿಗಳು, ಭ್ರಷ್ಟಾಚಾರಿಗಳು, ಆರೋಪಿಗಳು, ಗ್ಯಾಂಗ್ಸ್ಟರ್, ಭಯೋತ್ಪಾದಕರು ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಬಂಧಿಸಿಡಲು, ಶಿಕ್ಷೆ ವಿಧಿಸಲು ಕೇಳಿಬರುವ ಮುಂಚೂಣಿಯ ಹೆಸರು ತಿಹಾರ್ ಜೈಲು.1958ರಲ್ಲಿ ಆರಂಭಗೊಂಡ ಈ ತಿಹಾರ್ ಜೈಲಿಗೆ 67 ವರ್ಷಗಳ ಇತಿಹಾಸವಿದೆ. ಇದೀಗ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಬಜೆಟ್ ನಲ್ಲಿ ತಿಹಾರ್ ಜೈಲು ಸ್ಥಳಾಂತರದ ಕುರಿತು ಸ್ಥಳ ಗುರುತಿಸುವಿಕೆ, ಸಮೀಕ್ಷೆಗೆ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ತಿಹಾರ್ ಜೈಲಿನ ಸ್ಥಳವಕಾಶ ಕೊರತೆ ಎದುರಾಗುತ್ತಿದೆ. ಅಪರಾಧಿಗಳು, ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕೂಡಿ ಹಾಕಲು, ಶಿಕ್ಷೆ ವಿಧಿಸಲು ಸ್ಥಳವಕಾಶ ಸಾಲುತ್ತಿಲ್ಲ. ಹೀಗಾಗಿ ತಿಹಾರ್ ಜೈಲನ್ನು ಬೇರೆಗೆ ಸ್ಥಳಾಂತರಿಸಲು ಈ ಯೋಜನೆ ತರಲಾಗಿದೆ. ಕೈದಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಭದ್ರತೆ ಒದಿಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳಾಂತರ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ.
ಒಟ್ಟು 9 ಜೈಲು ಕಾಂಪ್ಲೆಕ್ಸ್ ಸೇರಿ 400 ಎಕರೆಯಲ್ಲಿರುವ ತಿಹಾರ್ ಜೈಲನ್ನು ಇದೀಗ ದೆಹಲಿ ಹೊರವಲಯಕ್ಕೆ ಸ್ಥಳಾಂತರಗೊಳಿಸಲು ದೆಹಲಿ ಸರ್ಕಾರ ಮುಂದಾಗಿದೆ. ಅತೀ ಹೆಚ್ಚು ಅಪರಾಧಿಗಳನ್ನು, ಆರೋಪಿಗಳನ್ನು ಹಾಗೂ ಶಿಕ್ಷೆ ವಿಧಿಸಿದವರನ್ನು ಏಕಕಾಲಕ್ಕೆ ಕೂಡಿ ಹಾಕಬಲ್ಲ ಜೈಲು ಇದಾಗಿದೆ.
ತಿಹಾರ್ ಜೈಲು ಇತಿಹಾಸ
ಪಶ್ಚಿಮ ದೆಹಲಿ ತಿಲಕ ನಗರ ಹಾಗೂ ಹಿರಿನಗರದ ನಡುವೆ ತಿಹಾರ್ ಜೈಲು ಕಾಂಪ್ಲೆಕ್ಸ್ ಇದೆ. ಇದೀಗ ತಿಹಾರ್ ಜೈಲಿನಲ್ಲಿ ಒಟ್ಟು 19,000 ಖೈದಿಗಳಿದ್ದಾರೆ. 1958ರಲ್ಲಿ ಈ ಜೈಲು ಆರಂಭಿಸಲಾಯಿತು. ಭೌಗೋಳಿಕ ಕಾರಣದಿಂದ ಆರಂಭಿಕ ಹಂತದಲ್ಲಿ ಈ ಜೈಲುನ್ನು ಪಂಜಾಬ್ ಆಡಳಿತದಲ್ಲಿತ್ತು. 1966ರಲ್ಲಿ ತಿಹಾರ್ ಜೈಲು ಆಡಳಿತವನ್ನು ದೆಹಲಿಗೆ ವರ್ಗಾಯಿಸಲಾಯಿತು.
ತಿಹಾರ್ ಜೈಲಿನಲ್ಲಿ ಹೈಪ್ರೊಫೈಲ್ ಖೈದಿಗಳಿಂದ ಹಿಡಿದು, ಲೋ ಪ್ರೊಫೈಲ್, ಭಯಾನಕ ಕ್ರಿಮಿನಲ್ಸ್ ವರೆಗೂ ಇಲ್ಲಿ ಕಳೆದಿದ್ದಾರೆ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸಚಿವರಾದ ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಕೂಡ ಇದೇ ಜೈಲಿನಲ್ಲಿ ಕಳೆದಿದ್ದಾರೆ. ಬಿಹಾರ ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಅಂತಾರಾಷ್ಟ್ರೀಯ ಸೀರಿಯಲ್ ಕಿಲ್ಲರ್ ಚಾರ್ಲೆಸ್ ಶೋಭರಾಜ್, ಗ್ಯಾಂಗ್ಸ್ಟರ್ ಚೋಟಾರಾಜನ್ ಸೇರಿದಂತೆ ಹಲವು ಹೈಫ್ರೋಫೈಲ್ ಈ ಜೈಲಿನಲ್ಲಿ ಕಳೆದಿದ್ದಾರೆ.