69ನೇ ವನ್ಯಜೀವಿ ಸಪ್ತಾಹ: ಬಿಸಿಲೆ ರಕ್ಷಿತಾ ಅರಣ್ಯ ಭಾಗದಲ್ಲಿ ಸ್ವಚ್ಛತಾ ಕಾರ್ಯ

ಹೊಸದಿಗಂತ ವರದಿ, ಸಕಲೇಶಪುರ :

ತಾಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯ ಬಿಸಿಲೆ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಸುಮಾರು ಹತ್ತು ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್, ಮದ್ಯಪಾನದ ಬಾಟಲಿಗಳು ಹಾಗೂ ನೀರಿನ ಬಾಟಲ್ ಗಳು ಸೇರಿದಂತೆ ಇತರ ತ್ಯಾಜ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸಂಗ್ರಹಿಸಿದರು.

ತಾಲೂಕಿಮ ಬಿಸಿಲೆ ಅರಣ್ಯ, ಬಿಸಿಲೇ ವೀಕ್ಷಣ ಗೋಪುರ ,ಚೌಡೇಶ್ವರಿ ದೇವಾಲಯ ಸುಮಾರು 18 ಕಿಲೋಮೀಟರ್ ಅರಣ್ಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು. ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಬಿಸಿಲೆ ಭಾಗದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸಿ ಬೇಜವಾಬ್ದಾರಿತನದಿಂದ ಎಲ್ಲೆಂದರಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಹಾಗೂ ಮಧ್ಯದ ಬಟ್ಟೆಗಳನ್ನು, ಅರಣ್ಯ ಇಲಾಖೆ ಶ್ರಮವಹಿಸಿ ಸುಮಾರು ಹತ್ತು ಚೀಲಕ್ಕೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಲಯ ಅಧಿಕಾರಿ ಸೋಮಶೇಖರ್ ಪ್ರವಾಸಿಗರು ಪ್ರವಾಸಕ್ಕೆ ಆಗಮಿಸುವಾಗ ಜವಾಬ್ದಾರಿಯಾಗಿ ವರ್ತಿಸಿ ,ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಬಿಸಾಡುವುದರಿಂದ ವನ್ಯಜೀವಿಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಾರದು. ಹಾಸನ ಜಿಲ್ಲೆಯ ಅತಿ ಸೂಕ್ಷ್ಮ ಪ್ರದೇಶವಾದ ಈ ಅರಣ್ಯ ಭಾಗದಲ್ಲಿ ಅಳಿವಿನ ಅಂಚಿನಲ್ಲಿರುವ ಸೂಕ್ಷ್ಮ ವನ್ಯಜೀವಿಗಳು ನೆಲೆಸಿದ್ದು ಪರಿಸರ ಹಾಗೂ ವನ್ಯಜೀವಿಗಳನ್ನು ಉಳಿಸುವುದು ಅರಣ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಂಗಡ ಹಳ್ಳ ಭಾಗದ ವಲಯ ಅಧಿಕಾರಿ ನರಸಿಂಹಮೂರ್ತಿ,ಚಂಗಡಹಳ್ಳಿ ಭಾಗದ ಅರಣ್ಯ ವಲಯ ಅಧಿಕಾರಿ ಪ್ರವೀಣ್,ಗಸ್ತು ಅರಣ್ಯ ಪಾಲಕರಾದ ಗೋವಿಂದರಾಜ್, ದಯಾನಂದ್, ರವಿ, ಹಾಗೂ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!