ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಮರದ ಬೆನ್ನಲ್ಲೇ7 ರಾಜ್ಯದ ವಿಧಾನಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತೆರವಾಗಿರುವ 13 ವಿಧಾನಸಭಾ ಸ್ಥಾನಗಳ ಭರ್ತಿಗಾಗಿ ಇದೀಗ ಚುನಾವಣೆ ನಡೆಯಲಿದೆ. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಖಂಡ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ವಿಧಾಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಜುಲೈ 10ಕ್ಕೆ ಮತದಾನ ನಡೆಯಲಿದೆ. ಜುಲೈ 13ಕ್ಕೆ ಮತ ಏಣಿಕೆ ನಡೆಯಲಿದೆ. ಇದಕ್ಕಾಗಿ ನಾಮಪತ್ರ ಸಲ್ಲಿಸಲು ಜೂನ್ 21 ಕೊನೆಯ ದಿನವಾಗಿದೆ. ಜೂನ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 26 ನಾಮತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಒಟ್ಟು 13 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬಿಹಾರದ ರುಪಾಲಿ ವಿಧಾನಸಭಾ ಕ್ಷೇತ್ರದ ಶಾಸಕಿ ಭಿಮಾ ಬಾರ್ತಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರುಪಾಲಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳದ ರಾಯಿಗಂಜ್ ಕ್ಷೇತ್ರದ ಶಾಸಕ ಕೃಷ್ಣ ಕಲ್ಯಾಣ್, ರಾನಾಘಾಟ್ ದಕ್ಷಿಣ ಕ್ಷೇತ್ರದ ಶಾಸಕ ಮುಕುಟ ಮಣಿ ಅಧಿಕಾರಿ, ಬಾಗ್ದಾ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕ ಬಿಸ್ವವಿಜ್ ದಾಸ್, ಮಣಿಕ್ಟಲಾ ಕ್ಷೇತ್ರದ ಶಾಸಕ ಸಾಧನ್ ಪಾಂಡೆ ರಾಜೀನಾಮೆ ನೀಡಿದ್ದಾರೆ. ಬಂಗಾಳ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ತಮಿಳುನಾಡಿನ ವಿಕ್ರವಂಡಿ ಕ್ಷೇತ್ರ, ಮಧ್ಯಪ್ರದೇಶದ ಅಮವಾರವರ, ಉತ್ತರಖಂಡದ ಮಂಗಲೌರ್, ಪಂಜಾಬ್‌ನ ಪೂರ್ವ ಜಲಂಧರ್, ಹಿಮಾಚಲ ಪ್ರದೇಶದ ದೆಹ್ರಾ, ಹಮ್ರಿಪುರ್ ಹಾಗೂ ನಾಲಾಗ್ರಹ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ.ತೆರವಾಗಿರುವ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಜುಲೈ 15ರೊಳಗೆ ಅಂತ್ಯವಾಗಬೇಕು. ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ.