Sunday, November 23, 2025

ಬೆಂಗಳೂರಿನಲ್ಲಿ 7 ಕೋಟಿ ಹಗಲು ದರೋಡೆ: 6 ಶಂಕಿತರ ಫೋಟೋ ಬಿಡುಗಡೆಗೊಳಿಸಿದ ಪೊಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಹಾಡಹಾಗಲೇ 7 ಕೋಟಿ 11ಲಕ್ಷದರೋಡೆ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ.

ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ.

ಹಳೆ ಆರೋಪಿಗಳು ಹಾಗು ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕ ಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ

ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದಾರೆ. ಅವ್ರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ.

ಸದ್ಯ ಚಾಲಕ, ಇಬ್ಬರು ಗನ್ ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಪಕ್ಕಾ ಪ್ಲಾನ್ ಮಾಡಿ ಈ ದರೋಡೆ ಮಾಡಲಾಗಿದೆ. ಅಶೋಕ ಪಿಲ್ಲರ್ ನಿಂದ ಸಿದ್ಧಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಸಿಸಿಟಿವಿ ಇಲ್ಲದೇ ಇರುವ ಜಾಗದಲ್ಲೇ ಎಟಿಎಂ ವಾಹನ ನಿಲ್ಲಿಸಿರುವ ಚಾಲಕ, ಅದಾದ ನಂತರ ಕಾರಿನಲ್ಲಿ ಬಂದ ಮೂವರು ರಾಬರ್ಸ್ ಜೊತೆಗೆ ಮಾತುಕತೆ. ಅದಾದ ನಂತರ ಎಟಿಎಂ ವಾಹನ zen ಕಾರ್ ಫಾಲೋ ಮಾಡಿದೆ. ಡೈರಿ ಸರ್ಕಲ್ ಫ್ಲೈ ಓವರ್ ನಲ್ಲಿ ರಾಬರಿ ಮಾಡಲಾಗಿದ್ದು, ಇಲ್ಲಿ ಜನರ ಓಡಾಟ ಇರೋದಿಲ್ಲ. ವಾಹನಗಳು ವೇಗವಾಗಿ ತೆರಳ್ತಾ ಇರುತ್ತೆ. ವಾಹನ ನಿಂತರು ಅನುಮಾನ ಬರೋದಿಲ್ಲ. ಅಲ್ಲದೇ ಸಿಸಿಟಿವಿ ದೃಶ್ಯ ಕೂಡ ಇಲ್ಲಿ‌ ಇಲ್ಲ. ಚಾಲಕ ಓಡಿಹೋಗಲು ಇಲ್ಲಿಂದ ಕಷ್ಟ. ಹಾಗಾಗಿಯೇ ಆರೋಪಿಗಳು ಡೈರಿ ಸರ್ಕಲ್ ಫ್ಲೈ ಓವರ್ ಫಿಕ್ಸ್ ಮಾಡಿಕೊಂಡಿದ್ದರು. ಇನ್ನು ಘಟನೆ ನಡೆದು 45 ರಿಂದ 1 ಗಂಟೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿಸಿರುವುದು ಕೂಡ ಹಲವು ಅನುಮಾನ ಹುಟ್ಟಿಸಿದೆ.

error: Content is protected !!