ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿ ಒಂದು ಕಾರ್ಯಕ್ರಮಕ್ಕೆ ಹೋದರೆ ಅವರಿಗಾಗಿ ಎಷ್ಟೆಲ್ಲಾ ಭದ್ರತೆ ನೀಡಲಾಗುತ್ತದೆ. ಇಂದು ಅಯೋಧ್ಯೆಯಲ್ಲಿ ಒಟ್ಟಾರೆ 7,000 ಗಣ್ಯರು ಆಗಮಿಸಲಿದ್ದು, ಹೇಗಿರಲಿದೆ ಭದ್ರತೆ?
ಏಳು ಸಾವಿರ ಗಣ್ಯರು ಸೇರಿದಂತೆ ಲಕ್ಷಾಂತರ ರಾಮಭಕ್ತರು ರಾಮಲಲಾನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ದೌಡಾಯಿಸುತ್ತಿದ್ದಾರೆ. ಜನರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಹಾಗೂ ಶಾಂತಿ ಕಾಪಾಡಲು ಸೂಕ್ತ ಭದ್ರತೆ ಒದಗಿಸಲಾಗಿದೆ.
ಇಡೀ ನಗರವನ್ನು ಕೆಂಪು ಹಾಗೂ ಹಳದಿ ವಲಯಗಳಾಗಿ ವಿಂಗಡಿಸಲಾಗಿದೆ. ವಿಶೇಷ ಸಂರಕ್ಷಣಾ ಗುಂಪಾದ ರಾಷ್ಟ್ರೀಯ ಭದ್ರತಾ ಪಡ, ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು, ಕೇಂದ್ರ ಮೀಸಲು ಪಡೆ ಕೋಬ್ರಾ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕ್ಷಿಪ್ರ ಕಾರ್ಯಾಪಡೆಯನ್ನು ನಗರಾದ್ಯಂತ ನಿಯೋಜನೆ ಮಾಡಲಾಗಿದೆ.
ನಗರಾದ್ಯಂತ ಡ್ರೋನ್‌ಗಳು ಹಾಗೂ ಎನ್‌ಎಸ್‌ಜಿ ಸ್ನೈಪರ್‌ಗಳನ್ನು ನಿಯೋಜಿಸಲಾಗಿದೆ. 100 ಡಿಎಸ್‌ಪಿಗಳು, 325 ಇನ್ಸ್‌ಪೆಕ್ಟರ‍್ಸ್, 800 ಸಬ್‌ಇನ್ಸ್‌ಪೆಕ್ಟರ‍್ಸ್, 11,000 ಪೊಲೀಸರನ್ನು ನಿಯೋಜಿಸಲಾಗಿದೆ.