ಭಾರೀ ಮಳೆ: ‘ದಾರಿ’ ಕಾಣದೆ ನಿಂತಲ್ಲೇ ನಿಂತಿವೆ 75,000 ಲೋಡ್ ಲಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆಯಿಂದಾಗಿ ತಮಿಳುನಾಡಿನಾದ್ಯಂತ 75,000 ಕ್ಕೂ ಹೆಚ್ಚು ಲೋಡ್ ಟ್ರಕ್‌ಗಳು ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಕದಲದೇ ನಿಂತಲ್ಲೇ ನಿಂತಿರುವುದಾಗಿ ತಮಿಳುನಾಡು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ತಿಳಿಸಿದ್ದಾರೆ. ಲೋಡ್‌ ಆಗಿರುವ ಟ್ರಕ್‌ಗಳು ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಬೇಕಿದೆ.

ತಮಿಳುನಾಡಿಗೆ ಬರುವ 25,000 ಕ್ಕೂ ಹೆಚ್ಚು ಟ್ರಕ್‌ಗಳು ಭಾರಿ ಮಳೆಯಿಂದಾಗಿ ಉತ್ತರ ರಾಜ್ಯಗಳಲ್ಲಿ ಸ್ಥಗಿತವಾಗಿದ್ದು, ಅಪಾರ ಪ್ರಮಾಣದ ವಸ್ತುಗಳ ಲಾರಿಗಳಲ್ಲಿಯೇ ಕೊಳೆಯುತ್ತಿವೆ. ಟ್ರಕ್‌ಗಳಲ್ಲಿ ತೆಂಗಿನಕಾಯಿ, ಸಾಗುವಾನಿ, ಪಿಷ್ಟ, ಆರೋಗ್ಯವರ್ಧಕ ಔಷಧಿಗಳಲ್ಲಿ ಪದಾರ್ಥಗಳಾಗಿ ಬಳಸುವ ಕಚ್ಚಾ ವಸ್ತುಗಳು, ಬೆಂಕಿಕಡ್ಡಿಗಳು, ಪಟಾಕಿಗಳು, ಉಕ್ಕು ಮತ್ತು ಕಬ್ಬಿಣದ ವಸ್ತುಗಳು, ಸೇಬು, ಯಂತ್ರಗಳು ಮತ್ತು ಜವಳಿ ವಸ್ತುಗಳಂತಹ ಸರಕುಗಳು ಸೇರಿವೆ.

ಸುರಕ್ಷಿತವಾಗಿ ಪ್ರಯಾಣಿಸಲು ಪರಿಸ್ಥಿತಿಗಳು ಸಾಮಾನ್ಯವಾಗುವವರೆಗೆ ಟ್ರಕ್‌ಗಳು ಆಯಾ ಸ್ಥಳಗಳಲ್ಲಿಯೇ ಇರುತ್ತವೆ. ಈ ಮಳೆಯಿಂದ ಟ್ರಕ್ ಚಾಲಕರು ಮತ್ತು ಸರಕುಗಳನ್ನು ಆರ್ಡರ್ ಮಾಡಿದ ಕಂಪನಿಗಳು ಸಾಕಷ್ಟು ತೊಂದರೆಗೀಡಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!