ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ತಾವು ಮಾಡುವ ಎಲ್ಲ ಕೆಲಸಗಳನ್ನು ರೀಲ್ಸ್ ಮಾಡಿ ಹಾಕೋದು ಟ್ರೆಂಡ್ ಆಗಿದೆ.
ಇದೇ ಟ್ರೆಂಡ್ ತಾರಕಕ್ಕೇರಿ ಇದೀಗ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ರೀಲ್ಸ್ ಮಾಡಿದ ಯುವಕರಿಗೆ ಬರೋಬ್ಬರಿ ದಂಡ ವಿಧಿಸಲಾಗಿದೆ.
ಉತ್ತರಪ್ರದೇಶದ ಹಾಪುರ್‌ನಲ್ಲಿ ಯುವಕರು ಕಾರ್ ಹಾಗೂ ಬೈಕ್‌ನಲ್ಲಿ ಚಲಿಸುತ್ತಾ ರೀಲ್ಸ್ ಮಾಡಿದ್ದಾರೆ. ರೀಲ್ಸ್ ವೈರಲ್ ಆಗಿದ್ದು, ಹಾಪುರ್ ಎಸ್‌ಪಿ ಅಭಿಷೇಕ್ ವರ್ಮಾ ರೀಲ್ಸ್ ವೀಕ್ಷಿಸಿ ಕ್ರಮ ಕೈಗೊಂಡಿದ್ದಾರೆ.
ಈ ಯುವಕರಿಗೆ ಒಟ್ಟಾರೆಯಾಗಿ 77 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ರಾಜ್ಯ ಸರ್ಕಾರದ ರೇಸಿಂಗ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ವೇಗದ ಪ್ರಯೋಗಗಳ ಲಿಖಿತ ಅನುಮತಿ ಇಲ್ಲದೆ ಚಾಲನೆ ಮಾಡಿದ ಯುವಕರಿಗೆ ಭಾರೀ ದಂಡ ಬಿದ್ದಿದೆ.