ಕೇಂದ್ರ ಸರ್ಕಾರಕ್ಕೆ 8 ವಷ೯ ಪೂರ್ಣ: ಬಿಜೆಪಿ ಯುವ ಮೋಚಾ೯ದಿಂದ ಬೈಕ್ ರ್ಯಾಲಿ

ಹೊಸದಿಗಂತ ವರದಿ,ಕಲಬುರಗಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ಹತ್ತು ಹಲವು ಯೋಜನೆಗಳನ್ನು ನೀಡುವುದರ ಮುಖಾಂತರ ಜನರಿಗೆ ಆಸರೆಯಾಗಿದೆ. ಈ ನಿಟ್ಟಿನಲ್ಲಿ  ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರಕಾರ 8 ವರ್ಷಗಳ ಯಶಸ್ವಿ ಆಡಳಿತ ಪೂರೈಸಿದ ಪ್ರಯುಕ್ತ ರಾಜ್ಯ ಬಿಜೆಪಿ ಯುವಮೋರ್ಚಾ ಆದೇಶದಂತೆ ಕಲಬುರಗಿ ನಗರ ಮತ್ತು ದಕ್ಷಿಣ ಮಂಡಲ ಹಾಗೂ ಉತ್ತರ ಮಂಡಲದ ವತಿಯಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

ದಕ್ಷಿಣ ಮಂಡಲದ ಶ್ರೀ ರಾಮ ಮಂದಿರ ದೇವಸ್ಥಾನದಿಂದ ನಗರದ ಜಗತ್ ವೃತ್ತದವರೆಗೆ ನೂರಾರು ಬಿಜೆಪಿ ಯುವ ಕಾಯ೯ಕತ೯ರು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿದರು. ಇನ್ನೋಂದೆಡೆ ನಗರದ ನಗರೇಶ್ವರ ಶಾಲಾ ಆವರಣದಿಂದ ಜಗತ್ ವೃತ್ತದವರೆಗೆ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ, ಆಯುಷ್ಮಾ ಭಾರತ, ಪ್ರಧಾನಿ ಮಂತ್ರಿ ಜನಧನ ಯೋಜನಾ, ಬೇಟಿ ಬಚಾವ್ ಬೇಟಿ ಫಡಾವ್, ಮೆಕ್ ಇನ್ ಇಂಡಿಯಾ, ಗರೀಬ್ ಕಲ್ಯಾಣ ಯೋಜನೆ, ಆತ್ಮ ನಿಭ೯ರ್ ಭಾರತ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮೋದಿ ನೇತೃತ್ವದ ಕೇಂದ್ರ ಸಕಾ೯ರ ದೇಶದ ಜನರಿಗೆ ನೀಡಿ, ನೆರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ಉಮೇಶ್ ಪಾಟೀಲ್, ರಾಜು ವಾಡೇಕರೊ, ಶ್ರೀನಿವಾಸ ದೇಸಾಯಿ, ಅಶೋಕ ಮಾನಕರ್, ರಾಮು ಗುಮ್ಮಟ, ಜಯಸಿಂಗ್ ರಾಠೋಡ, ಪಾಲಿಕೆ ಸದಸ್ಯ ಸಚಿನ ಕಡಗಂಚಿ, ದಿಗಂಬರ ಮಾಗಣಗೇರಿ,ಬಸವರಾಜ ಮುನ್ನೋಳ್ಳಿ, ಚನ್ನವೀರ ಲಿಂಗನವಾಡಿ, ಮಹೇಶ್ ಚವ್ಹಾಹ, ಶರಣು ಅವರಾದಿ, ಆಕಾಶ ಪಾರಿವಾಳ ಸೇರಿದಂತೆ ಹಲವು ಯುವ ಮೋಚಾ೯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!