ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಕೋ ಬ್ಯಾಂಕ್ನ 41 ಸಾವಿರ ಖಾತೆದಾರರಿಗೆ ತಪ್ಪಾಗಿ 820 ಕೋಟಿ ರೂ.ಗಳ ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕರ್ನಾಟಕದ ಮಂಗಳೂರು, ಪಶ್ಚಿಮ ಬಂಗಾಳದ ಕೋಲ್ಕತ್ತಾ ಸಹಿತವಿ 13 ಕಡೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿದ ಸಿಬಿಐ, ನವೆಂಬರ್ ತಿಂಗಳಲ್ಲಿ ಐಎಂಪಿಎಸ್ (Immediate Payment Service-IMPS) ಮೂಲಕ ಯುಕೋ ಬ್ಯಾಂಕ್ನ ಖಾತೆದಾರರಿಗೆ ಹಣ ಜಮೆಯಾಗಿತ್ತು. ಈ ಕುರಿತು ಮಂಗಳೂರು, ಕೋಲ್ಕತ್ತಾ ಹಾಗೂ ಇತರ ನಗರಗಳಲ್ಲಿ ಸೋಮವಾರ ತಡರಾತ್ರಿಯವರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದೆ.
ಬ್ಯಾಂಕ್ನೊಂದಿಗೆ ಕಾರ್ಯನಿರ್ವಹಿಸುವ ಇಬ್ಬರು ಇಂಜಿನಿಯರ್ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್ ದೂರು ನೀಡಿತ್ತು. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದೆ.
CBI CONDUCTS SEARCHES AT AROUND 13 LOCATIONS IN WEST BENGAL & KARNATAKA IN AN ON-GOING INVESTIGATION OF A CASE RELATED TO ALLEGED IMPS TRANSACTION WORTH Rs. 820 CRORE (APPROX) IN UCO BANK ACCOUNTS pic.twitter.com/OX2qN9jGtK
— Central Bureau of Investigation (India) (@CBIHeadquarters) December 5, 2023
ವಿವಿಧ ನಗರಗಳಲ್ಲಿ ನಡೆದ ಈ ಶೋಧ ಕಾರ್ಯದ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ವರ್ಷದ ನವೆಂಬರ್ 10 ಮತ್ತು 13ರ ಮಧ್ಯೆ 8.53 ಲಕ್ಷಕ್ಕೂ ಹೆಚ್ಚು ಐಎಂಪಿಎಸ್ ವಹಿವಾಟುಗಳು ನಡೆದಿವೆ. ಇದರಲ್ಲಿ ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ 820 ಕೋಟಿ ರೂ.ಗಳು ಯುಕೊ ಬ್ಯಾಂಕ್ ಗ್ರಾಹಕರ 41,000 ಖಾತೆಗಳಿಗೆ ಜಮೆಯಾಗಿದೆ. ವಹಿವಾಟುಗಳು ವಿಫಲವಾಗಿವೆ’ಎಂದು ಮೂಲ ಬ್ಯಾಂಕ್ ತಿಳಿಸಿದ ಮೇಲೂ ತಪ್ಪಾಗಿ’ ಹಣ ಜಮೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ, ಮೂಲ ಬ್ಯಾಂಕ್‌ಗಳ ಖಾತೆದಾರರಿಂದ ಸರಿಯಾದ ಡೆಬಿಟ್ ಇಲ್ಲದೆ ಯುಕೋ ಬ್ಯಾಂಕ್ ಖಾತೆಗಳಿಗೆ ಅಂದಾಜು 820 ಕೋಟಿ ರೂ. ಜಮೆಯಾಗಿದೆ. ಯುಕೋ ಬ್ಯಾಂಕ್ನ ಹಲವಾರು ಗ್ರಾಹಕರು ಈ ವಹಿವಾಟಿನ ಲಾಭ ಪಡೆದು ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.