ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ರಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೆಡಿಕಲ್ ಲೈಸೆನ್ಸ್ ಫೀಲ್ಡ್‌ನಲ್ಲಿ ಭಾರೀ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಒಬ್ಬನೇ ವೈದ್ಯನ ಹೆಸರಿನಲ್ಲಿ ಬರೋಬ್ಬರಿ 83 ಆಸ್ಪತ್ರೆಗಳು ನೋಂದಣಿಯಾಗಿವೆ!
ಮೀರತ್, ಕಾನ್ಪುರ ಹಾಗೂ ಇನ್ನಿತರ ಕಡೆಗಳಲ್ಲಿ ತನ್ನ ಹೆಸರಿನಲ್ಲಿ ವೈದ್ಯ 83 ಕಡೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ವೈದ್ಯರಿಗೆ ಈಗಾಗಲೇ ನೊಟೀಸ್ ಕಳುಹಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಲು ಆದೇಶಿಸಿದ್ದು, ಈ ವೇಳೆ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಸುಮಾರಯ 449 ಸಂಸ್ಥೆಗಳಲ್ಲಿ ಸುಮಾರು 15 ವೈದ್ಯರು ಕಾನೂನು ಬಾಹಿರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.