ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಒಟ್ಟು 7.89 ಕೋಟಿ ಮತದಾರರಲ್ಲಿ 6.60 ಕೋಟಿಗೂ ಹೆಚ್ಚು ಜನರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಚುನಾವಣಾ ಆಯೋಗ(ಇಸಿ) ಸೋಮವಾರ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ನಡೆಯುತ್ತಿದೆ.
ಬಿಹಾರದ ಎಸ್‌ಐಆರ್‌ನಲ್ಲಿ ಭರ್ತಿ ಮಾಡಿದ ನಮೂನೆಗಳನ್ನು(ಇಎಫ್‌ಗಳು) ಸಲ್ಲಿಸಲು ಇನ್ನೂ 11 ದಿನ ಬಾಕಿ ಇರುವಾಗ, ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒಗಳು) ಎರಡು ಸುತ್ತಿನ ಮನೆ-ಮನೆಗೆ ಭೇಟಿ ನೀಡಿದ ನಂತರ ಬಿಹಾರದ 7,89,69,844 ಮತದಾರರಲ್ಲಿ 6,60,67,208 ಅಥವಾ ಶೇಕಡಾ 83.66 ರ ಇಎಫ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.
ಇಲ್ಲಿಯವರೆಗೆ ಶೇಕಡಾ 1.59 ರಷ್ಟು ಮತದಾರರು ಸಾವನ್ನಪ್ಪಿದ್ದಾರೆ. ಶೇಕಡಾ 2.2 ರಷ್ಟು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ಶೇಕಡಾ 0.73 ರಷ್ಟು ಜನ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಕಂಡುಬಂದಿದೆ.
ಶೇ. 88.18 ರಷ್ಟು ಮತದಾರರು ಈಗಾಗಲೇ ತಮ್ಮ ಇ.ಎಫ್. ಸಲ್ಲಿಸಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಅಥವಾ ಒಂದೇ ಸ್ಥಳದಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಂಡಿದ್ದಾರೆ ಅಥವಾ ತಮ್ಮ ಹಿಂದಿನ ವಾಸಸ್ಥಳದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಕೇವಲ ಶೇ. 11.82 ರಷ್ಟು ಮತದಾರರು ಮಾತ್ರ ತಮ್ಮ ಭರ್ತಿ ಮಾಡಿದ ಇ.ಎಫ್.ಗಳನ್ನು ಸಲ್ಲಿಸಬೇಕಾಗಿದೆ ಮತ್ತು ಅವರಲ್ಲಿ ಹಲವರು ಮುಂಬರುವ ದಿನಗಳಲ್ಲಿ ದಾಖಲೆಗಳೊಂದಿಗೆ ತಮ್ಮ ನಮೂನೆಗಳನ್ನು ಸಲ್ಲಿಸಲು ಸಮಯ ಕೋರಿದ್ದಾರೆ ಎಂದು ಆಯೋಗ ತಿಳಿಸಿದೆ.