March 22, 2026
Sunday, March 22, 2026
spot_img

ಸತತ 9 ಗೆಲುವು: ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಸರಿಸಾಟಿಯೇ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್ ಅಭಿಯಾನವನ್ನು ವಿಶ್ವ ದಾಖಲೆಯೊಂದಿಗೆ ಅದ್ಧೂರಿಯಾಗಿ ಆರಂಭಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಯುಎಸ್ಎ (USA) ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಸತತವಾಗಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 161 ರನ್ ಕಲೆಹಾಕಿತು. 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಯುಎಸ್ಎ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 29 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತು.

ಇದನ್ನೂ ಓದಿ:

ಈ ಮೊದಲು ಟಿ20 ವಿಶ್ವಕಪ್‌ನಲ್ಲಿ ಸತತ ಗೆಲುವಿನ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. 2024ರ ವಿಶ್ವಕಪ್‌ನಲ್ಲಿ ಸತತ 8 ಪಂದ್ಯಗಳನ್ನು ಗೆಲ್ಲುವ ಮೂಲಕ ಹರಿಣಗಳ ಪಡೆ ಈ ಸಾಧನೆ ಮಾಡಿತ್ತು. ಆದರೆ, 2024ರ ಟೂರ್ನಿಯಲ್ಲಿ ಅಜೇಯವಾಗಿ ಎಂಟು ಪಂದ್ಯ ಗೆದ್ದಿದ್ದ ಭಾರತ, ಈಗ 2026ರ ಮೊದಲ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಸತತ 9ನೇ ಜಯ ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !