ಈ ಕುಟುಂಬದ 9 ಜನರರು ಹುಟ್ಟಿದ್ದು ಒಂದೇ ದಿನ, ಅದು ಹೇಗೆ ಸಾಧ್ಯ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾಮಾನ್ಯವಾಗಿ ನಮಗೆ ಪರಿಚಯದವರು ನಾವು ಹುಟ್ಟಿದ ದಿನದಂದೇ ಹುಟ್ಟಿದರೆ, ಸಂತಸ ವ್ಯಕ್ತಪಡಿಸ್ತೇವೆ. ಆದರೆ ಇಲ್ಲೊಂದು ಕುಟುಂಬದ 9 ಮಂದಿ ಒಂದೇ ದಿನಾಂಕದಲ್ಲಿ ಹುಟ್ಟಿರುವುದು ನಿಜಕ್ಕೂ ಅಚ್ಚರಿ ತರುವಂತಿದೆ.

ಪಾಕಿಸ್ತಾನದ ಲರ್ಕಾನಾದ ನಿವಾಸಿಗಳಾದ ಅಮೀರ್ ಮತ್ತು ಖುದಿಜಾ ಅವರಿಗೆ ಆಗಸ್ಟ್ 1 ವಿಶೇಷ ದಿನವಾಗಿದೆ. ಅವರ ಕುಟುಂಬದಲ್ಲಿ ಒಂಬತ್ತು ಸದಸ್ಯರಿದ್ದಾರೆ. ಇವರೆಲ್ಲರ ಜನ್ಮದಿನಗಳು ಕೂಡ ಒಂದೇ ದಿನವಾಗಿದೆ. ದಂಪತಿ 1991ರಲ್ಲಿ ತಮ್ಮ ಹುಟ್ಟುಹಬ್ಬದಂದು ಮದುವೆಯಾದರು. ಅದಾದ ಒಂದು ವರ್ಷದ ನಂತರ ಹಿರಿಯ ಮಗಳು ಸಿಂಧು ಜನಿಸಿದಳು. ಅದರ ನಂತರ ಆಗಸ್ಟ್ 1ರಂದು ಸಸುಯಿ-ಸಪ್ನಾ, ಅಮೀರ್-ಅಂಬರ್ ಮತ್ತು ಅಮ್ಮರ್-ಅಹ್ಮರ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯದರು. ಒಂದೇ ದಿನದಲ್ಲಿ ಜನಿಸಿದ ಅವಳಿಗಳ ದಾಖಲೆಯನ್ನೂ ಅವರು ಹೊಂದಿದ್ದಾರೆ.

ಇದೆಲ್ಲವೂ ಸಹಜವಾಗಿಯೇ ನಡೆದಿದೆ ಎಂದು ಅಮೀರ್ ಮತ್ತು ಖುದಿಜಾ ದಂಪತಿಗಳು ಹೇಳುತ್ತಾರೆ.
ಎಲ್ಲಾ ಮಕ್ಕಳು ಕೂಡ ಸಾಮಾನ್ಯ ಹೆರಿಗೆಯಿಂದ ಜನಿಸಲ್ಪಟ್ಟಿವೆ. ಹೀಗಾಗಿ ಆಗಸ್ಟ್ 1 ಬಂತೆಂದರೆ ಅವರ ಕುಟುಂಬದಲ್ಲಿ ದೊಡ್ಡ ಸಂಭ್ರಮ ಮನೆ ಮಾಡಿರುತ್ತದೆ.

ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಸಂತೋಷವಾಗುತ್ತದೆ ಎಂದು ಕುಟುಂಬದವರು ಹೇಳುತ್ತಾರೆ. ಇದು ನಿಜಕ್ಕೂ ಅಪರೂಪದ ಸಂಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!