ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ 9 ಕಟ್ಟಾ ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರ ತಲೆಗೆ 26 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಭದ್ರತಾ ಪಡೆಗಳು ಇವರ ಶರಣಾಗತಿಯಲ್ಲಿ ಬಹು ಮುಖ್ಯಪಾತ್ರ ವಹಿಸಿದೆ ಎಂದು ಸುಕ್ಮಾ ಎಸ್ಪಿ ಕಿರಣ್ ಚೌಹಾಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಛತ್ತೀಸ್ಗಢ ಸರ್ಕಾರವು ಪುನರ್ವಸತಿ ನೀತಿಯಡಿ ಹಲವು ರೀತಿಯ ಸಹಾಯಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಇಂದು 6 ಮಹಿಳೆಯರು ಸೇರಿದಂತೆ 9 ಮೋಸ್ಟ್ ವಾಂಟೆಡ್ ನಕ್ಸಲರು ಶಸ್ತ್ರಾಸ್ತ್ರ ತೊರೆದು ಶರಣಾಗಿದ್ದಾರೆ. ಶರಣಾದ ಎಲ್ಲ ನಕ್ಸಲರಿಗೆ ತಲಾ 25,000 ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಅವರಿಗೆ ಬಟ್ಟೆಗಳನ್ನು ನೀಡಲಾಯಿತು ಮತ್ತು ಸಿಹಿ ತಿಂಡಿಗಳನ್ನು ಸಹ ತಿನ್ನಿಸಲಾಯಿತು. ಪುನರ್ವಸತಿ ನೀತಿಯಡಿ ಇತರ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಶರಣಾದ ನಕ್ಸಲರು ಜಿಲ್ಲೆಯಲ್ಲಿ ನಡೆದ ಅನೇಕ ನಕ್ಸಲೀಯ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ಎಸ್ಪಿ ಹೇಳಿದರು.
ಪೊಲೀಸರ ಮುಂದೆ ಶರಣಾಗಿದ ಮೋಸ್ಟ್ ವಾಂಟೆಡ್ ನಕ್ಸಲರು
22 ವರ್ಷದ ಬಂಡು ಅಲಿಯಾಸ್ ಬಂಡಿ ಮಡ್ಕಮ್, ಈತನ ತಲೆಗೆ 8 ಲಕ್ಷ ರೂ. ಘೋಷಣೆಯಾಗಿತ್ತು, 45 ವರ್ಷದ ಮಾಸೆ ಅಲಿಯಾಸ್ ವೆಟ್ಟಿ ಕಣ್ಣಿ, ಈತನ ತಲೆಗೆ 5 ಲಕ್ಷ ರೂ., ಪದಮ್ ಸಮ್ಮಿ (32), ಈತನ ತಲೆಗೂ 5 ಲಕ್ಷ ರೂ.,ಮದ್ವಿ ಹಂಗಾ ಅಲಿಯಾಸ್ ಕುವ್ವೆರ್ ಹಂಗಾ (39 ವರ್ಷ), ಈತನ ತಲೆಗೆ 2 ಲಕ್ಷ, ಪುನೆಮ್ ಮಗಂಡಿ (36 ವರ್ಷ) ಈತನ ತಲೆಗೆ ರೂ. 2 ಲಕ್ಷ, 27 ವರ್ಷದ ಅಲಿಯಾಸ್ ಜಯೋಪಿ ರೂ. 2 ಲಕ್ಷ, ಮಡ್ಕಮ್ ಶಾಂತಿ (22 ವರ್ಷ) ಬಹುಮಾನ ರೂ. 2 ಲಕ್ಷ, ಮುಚಕಿ ಮಾಸೆ (32 ವರ್ಷ) ಹಾಗೂ ಕಡ್ತಿ ಹಿಡಿಯಾ ಅಲಿಯಾಸ್ ಹಿತೇಶ್ ಶರಣಾದ ನಕ್ಸಲರು,