ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ.
ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ ಒಂಭತ್ತು ಜನ ಸಿಬ್ಬಂದಿ ಉಸಿರಾಡಲು ಪರದಾಡುವಂತಾಯಿತು. ಹೊರಗಡೆ ಬರಲಾಗದೆ ಕಂಗಾಲಾಗಿದ್ದರು. ತಕ್ಷಣವೇ ಲಿಫ್ಟ್ನಲ್ಲಿದ್ದ ಒರ್ವ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ತಕ್ಷಣವೇ ಲಿಫ್ಟ್ನಲ್ಲಿ ಸಿಲುಕಿದ 9 ಮಂದಿಯ ರಕ್ಷಣೆಗಾಗಿ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ತಡೆ ಗೋಡೆ ಇರುವ ಕಡೆ ಲಿಫ್ಟ್ ಸಿಲುಕಿದ ಪರಿಣಾಮ ಒಳಗಿನವರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.ಕೊನೆಗೂ ಲಿಫ್ಟ್ ದುರಸ್ತಿ ಆಗದ ಆಗದ ಕಾರಣ ಡ್ರಿಲ್ಲಿಂಗ್ ಮಷಿನ್ ಬಳಸಿ ಬಳಿ ಇದ್ದ ತಡೆಗೋಡೆಯನ್ನು ಒಡೆದು ಲಿಫ್ಟ್ ಒಳಗಿದ್ದವರನ್ನು ರಕ್ಷಿಸಲಾಯಿತು.