ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತದಲ್ಲಿರುವ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡವರು ಎಂದು ಬಿಹಾರ ಜೆಡಿಯು ನಾಯಕ, ಕಟ್ಟಡ ನಿರ್ಮಾಣ ಖಾತೆ ಸಚಿವ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ ಆಡಳಿತಾರೂಢ ಪಕ್ಷದ ನಾಯಕರು, ಸಚಿವರು, ಸರ್ಕಾರದ ಭಾಗವಾಗಿರುವವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಹೆಚ್ಚಾಗಿದೆ.
ಇದೀಗ ಚೌಧರಿ, ನಳಂದಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ , ಭಾರತದಲ್ಲಿ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡವರಾಗಿದ್ದಾರೆ. ದಲಿತರು ಜಾತಿವಾದದ ಕಿರುಕುಳ ಸಹಿಸಲಾಗದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಿದರು.
ರಂಜಾನ್ ಹಿನ್ನೆಲೆಯಲ್ಲಿ ಬಿಹಾರದ ಮುಸ್ಲಿಂ ನೌಕರರಿಗೆ ರಾಜ್ಯ ಸರ್ಕಾರವು ವಿಶೇಷ ಸವಲತ್ತು ನೀಡಿದೆ. ಮುಸ್ಲಿಂ ನೌಕರರು ಕಚೇರಿಗೆ ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಬಂದು ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲು ಕಚೇರಿಯಿಂದ ತೆರಳಬಹುದು ಎಂಬುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಬಿಜೆಪಿ ಹಾಗೂ ಜೆಡಿಯು ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.