ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲುಷಿತ ಆಹಾರ ಸೇವಿಸಿ 90 ಮಂದಿ ಪ್ರಯಾಣಿಕರು ಅಸ್ಟಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಚೆನ್ನೈನಿಂದ ಗುಜರಾತ್‌ಗೆ ತೆರಳುತ್ತಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ಪ್ಯಾಕೇಜ್ ರೈಲಿನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುಜರಾತ್‌ನ ಪಾಲಿಟಾನಾಗೆ ಕಾಯ್ದಿರಿಸಲಾಗಿದ್ದ ಭಾರತ್ ಗೌರವ್ ಯಾತ್ರಾ ವಿಶೇಷ ರೈಲಿನಲ್ಲಿ ಈ ಪ್ರಯಾಣಿಕರು ಚಲಿಸುತ್ತಿದ್ದರು. ರಾತ್ರಿ ಊಟದ ಬಳಿಕ ಹೊಟ್ಟೆ ನೋವು, ವಾಂತಿಯಿಂದ ಬಳಲಿದ್ದಾರೆ. ಕೂಡಲೇ ಪುಣೆ ರೈಲು ನಿಲ್ದಾಣದಲ್ಲಿ ತುರ್ತು ರೈಲು ನಿಲುಗಡೆ ಮಾಡಲಾಗಿದೆ. ಕೂಡಲೇ ವೈದ್ಯರು ನೆರವಿಗೆ ಧಾವಿಸಿ, 90 ಮಂದಿ ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದ್ದಾರೆ.
ಸುಮಾರು 50 ನಿಮಿಷಗಳ ನಂತರ ರೈಲು ತನ್ನ ಪ್ರಯಾಣ ಮುಂದುವರೆಸಿತು. ಪ್ರಯಾಣಿಕರು ತಾವೇ ಆಹಾರ ತಂದಿದ್ದರು, ರೈಲ್ವೆ ಸಿಬ್ಬಂದಿ ಆಹಾರ ಪೂರೈಸಿಲ್ಲ ಎಂದು ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಹೇಳಿಕೆ ತಿಳಿಸಿದೆ.