ಸ್ಕೂಟರ್ ಡಿಕ್ಕಿಯಲ್ಲಿ 903 ಗ್ರಾಂ ಅಕ್ರಮ ಗಾಂಜಾ ಮಾರಾಟ: ಓರ್ವ ಆರೋಪಿ ಅರೆಸ್ಟ್

ಹೊಸದಿಗಂತ ಮುಂಡಗೋಡ:

ತಾಲೂಕಿನ ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿ 903 ಗ್ರಾಂ ತೂಕದ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಮಹಮ್ಮದಅನಿಸ ಬೇಗ ಎಂಬಾತನೇ ಬಂಧಿತ ಆರೋಪಿ. ಮಂಗಳವಾರ ಬೆಳಿಗ್ಗೆ ಪಾಳಾದ ರಾಮಾಪುರ ಕ್ರಾಸ್ ಸಾರ್ವಜನಿಕ ರಸ್ತೆಯ ಮೇಲೆ ಡಿಯೊ ಸ್ಕೂಟಿಯ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಹತ್ತು ಸಾವಿರ ಬೆಲೆ ಬಾಳುವ ಗಾಂಜಾ ಹಾಗೂ ಆರೋಪಿ ಮಹಮ್ಮದಅನಿಸ ಬೇಗನನ್ನು ಬಂಧಿಸಿದ್ದಾರೆ.

ಆರೋಪಿಯಿಂದ 50 ಸಾವಿರಸಾವಿರ ಮೌಲ್ಯದ 902ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ ಜಿಲ್ಲಾವರಿಷ್ಠಾಧಿಕಾರಿ ಎಮ್ ನಾರಾಯಣ, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಜಿ, ಜಗದೀಶ ನಾಯ್ಕ, ಡಿವೈಎಸ್ಪಿ ಗಣೇಶ ಕೆ.ಎಲ್, ಮಾರ್ಗದರ್ಶನದಲ್ಲಿ ಸಿಪಿಐ ಆರ್ ನೀಲಮ್ಮನವರ ನೇತ್ರತ್ವದಲ್ಲಿ ಪಿಎಸೈ ಪರಶುರಾಮ ಮಿರ್ಜಗಿ, ಸಿಬ್ಬಂದಗಾಳದ ಗಣಪತಿ ಹುನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಾಲತೇಶ ಮುದೋಳ, ಮತ್ತು ಬಸವರಾಜ ಒಡೆಯರ ಕಾರ್ಯಚರಣೆಯಲಿದ್ದರು. ಈ ಕರ‍್ಯಕ್ಕೆ ಜಿಲ್ಲಾವರಿಷ್ಠಾಧಿಕಾರಿ ಎಮ್ ನಾರಾಯಣರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!