ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣಾ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲು, ಭಾರತೀಯ ವಾಯುಪಡೆಗೆ 97 ಎಲ್‌ಸಿಎ ಮಾರ್ಕ್ 1ಎ ಫೈಟರ್ ಜೆಟ್‌ಗಳನ್ನು ಖರೀದಿಸುವ ಯೋಜನೆಗೆ ಭಾರತ ಅನುಮೋದನೆ ನೀಡಿದೆ.
ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ 97 LCA ಮಾರ್ಕ್ 1A ಯುದ್ಧವಿಮಾನಗಳ ಸ್ವಾಧೀನಕ್ಕೆ ಅಂತಿಮ ಅನುಮೋದನೆಯನ್ನು ನೀಡಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನಗಳನ್ನು ಉತ್ಪಾದಿಸಲು ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಸರ್ಕಾರವು ಕೆಲವು ವರ್ಷಗಳ ಹಿಂದೆ ಸುಮಾರು 48,000 ಕೋಟಿ ರೂ.ಗೆ 83 ವಿಮಾನಗಳಿಗೆ ಆರ್ಡರ್ ನೀಡಿರುವುದು, LCA ಮಾರ್ಕ್ 1A ಯುದ್ಧವಿಮಾನಗಳಿಗೆ ಎರಡನೇ ಆರ್ಡರ್ ಆಗಿರುತ್ತದೆ.