9ನೇ ಆವೃತ್ತಿಯ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಸಾಹಿತ್ಯ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ಸ್ ಕ್ಲಬ್ ವತಿಯಿಂದ ಮೈಸೂರಿನಲ್ಲಿಂದು 9ನೇ ಆವೃತ್ತಿಯ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ , ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ, ಸಾಹಿತಿ, ಕೆ.ಬಾನು ಮುಷ್ತಾಕ್ ಹಾಗೂ ಲೇಖಕಿ ದೀಪಾ ಭಾಸ್ತಿ, ಡಿಆರ್ ಡಿಓ ನಿವೃತ್ತ ವಿಜ್ಞಾನಿ ಪ್ರಹ್ಲಾದ್ ರಾಮ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪ್ರಮೋದಾದೇವಿ ಒಡೆಯರ್, ಸಾಹಿತ್ಯ ಜನರ ಹೋರಾಟ, ಕನಸುಗಳ ಕನ್ನಡಿ ಇದ್ದಂತೆ. ಯುವಕರು ಸಾಹಿತ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು ಎಂದರು. ಕೆ.ಬಾನು ಮುಷ್ತಾಕ್, ದೇಶದ ಪ್ರತಿಯೊಂದು ಸಮಸ್ಯೆಗೆ ಬರಹಗಾರರು ಸ್ಪಂದಿಸಬೇಕು. ಆದರೆ ಸಮಸ್ಯೆಗೆ ಎಂದಿಗೂ ಪರಿಹಾರ ಕೊಡಲು ಸಾಧ್ಯವಿಲ್ಲ. ಬರಹವನ್ನು ಓದುವ ಓದುಗರೇ ಸಮಸ್ಯೆಗೆ ಪರಿಹಾರ ಹುಡುಕುವಂತೆ ಮಾಡುವ ರೀತಿ ಬರಹ ಜನರನ್ನು ಆಕರ್ಷಿಸಬೇಕು. ಬರವಣಿಗೆ ಅವರಲ್ಲಿ ಮತ್ತಷ್ಟು ಬೆಳೆಯಬೇಕು. ಆಗ ಮಾತ್ರ ಬರಹಕ್ಕೆ ಅರ್ಥ ದೊರೆತಂತಾಗಲಿದೆ ಎಂದು ತಿಳಿಸಿದರು. ಅನುವಾದಕಿ ದೀಪಾ ಭಾಸ್ತಿ, ಅನುವಾದ ಲೇಖಕರ ಅಭಿವ್ಯಕ್ಯಿ ಹಾಗೂ ಸೃಜನಶೀಲತೆಯ ರೂಪಾಂತರ ಎಂದು ಹೇಳಿದರು. ಪ್ರಹ್ಲಾದ್ ರಾಮ್ ರಾವ್, ದೇಶದಲ್ಲಿ ಜನರ ನೆಮ್ಮದಿಗೆ ಆಂತರಿಕ ಭದ್ರತೆಯೂ ಅಗತ್ಯ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!