October 15, 2026
Thursday, October 15, 2026
spot_img

ಫಿಟ್ & ಫುಡ್ 15 | ಮಾಮೂಲಿ ಇಡ್ಲಿಗೆ ಬೈ-ಬೈ ಹೇಳಿ.. ದಿನವಿಡೀ ಎನರ್ಜಿ ನೀಡುವ ‘ಬೀಟ್‌ರೂಟ್ ಇಡ್ಲಿ’ ಟ್ರೈ ಮಾಡಿ

ಏನೇನ್ ಬೇಕು

ಇಡ್ಲಿ ಹಿಟ್ಟು

ತುರಿದ ಬೀಟ್‌ರೂಟ್

ಹಸಿಮೆಣಸಿನಕಾಯಿ ಹಾಗೂ ಶುಂಟಿ ಪೇಸ್ಟ್

ಸಾಸಿವೆ, ಜೀರಿಗೆ, ಕಾರಿಬೇವು

ಕೊಬ್ಬರಿ ತುರಿ

ಉಪ್ಪು

ಎಣ್ಣೆ

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಬೀಟ್‌ರೂಟ್ ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಿ. ಬೇಕಿದ್ದರೆ ಇದನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಪ್ಯೂರಿ ಮಾಡಿಕೊಳ್ಳಬಹುದು. ಇಡ್ಲಿ ಹಿಟ್ಟಿಗೆ ಈ ಬೀಟ್‌ರೂಟ್ ಪ್ಯೂರಿ, ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಹಾಗೂ ಕೊಬ್ಬರಿ ತುರಿ ಹಾಕಿ ಒಗ್ಗರಣೆ ಮಾಡಿ ಹಿಟ್ಟಿಗೆ ಸೇರಿಸಿದರೆ ಇಡ್ಲಿ ಮತ್ತಷ್ಟು ರುಚಿಯಾಗಿರುತ್ತೆ. ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಈ ಹಿಟ್ಟನ್ನು ಹೊಯ್ದು 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿದರೆ ಘಮಘಮಿಸುವ ಬೀಟ್‌ರೂಟ್ ಇಡ್ಲಿ ಸಿದ್ಧ!

ಇದನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಏನ್ ಲಾಭ?

ಬೀಟ್‌ರೂಟ್‌ನಲ್ಲಿ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಹೇರಳವಾಗಿದ್ದು, ರಕ್ತಹೀನತೆ ತಡೆಯಲು ನೆರವಾಗುತ್ತದೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ದೇಹಕ್ಕೆ ತಕ್ಷಣದ ಶಕ್ತಿ ನೀಡಲು ಇದು ಸಹಕಾರಿ.

ತರಕಾರಿ ತಿನ್ನಲು ಹಠ ಮಾಡುವ ಮಕ್ಕಳಿಗೆ ಈ ರೀತಿ ಬಣ್ಣ-ಬಣ್ಣದ ಇಡ್ಲಿ ಮಾಡಿಕೊಟ್ಟರೆ, ಅವರು ತಟ್ಟೆ ಖಾಲಿ ಮಾಡುವುದು ಖಚಿತ.

Must Read