October 14, 2026
Wednesday, October 14, 2026
spot_img

ಫಿಟ್ & ಫುಡ್ 14 | ಮಧುಮೇಹಿಗಳಿಗೆ ಸಂಜೀವಿನಿ ಈ ರಾಗಿ ದೋಸೆ.. ರುಚಿ ಜೊತೆ ಆರೋಗ್ಯ ಉಚಿತ!

ಸೂಪರ್‌ಫುಡ್ ರಾಗಿಯ ಡಿಫರೆಂಟ್ ರುಚಿ. ಹೀಗೆ ಮಾಡಿದರೆ ಪ್ಲೇಟ್ ಖಾಲಿಯಾಗುವುದು ಖಂಡಿತ.

ಏನೇನ್ ಬೇಕು

ರಾಗಿ ಹಿಟ್ಟು

ಮೊಸರು

ಜೀರಿಗೆ, ಈರುಳ್ಳಿ, ಕ್ಯಾರೆಟ್, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು

ಉಪ್ಪು, ಇಂಗು

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಮೊಸರು, ಉಪ್ಪು ಮತ್ತು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ 10 ನಿಮಿಷ ನೆನೆಯಲು ಬಿಡಿ.

ಈಗ ಹಂಚನ್ನು ಕಾಯಿಸಿ, ಸ್ವಲ್ಪ ಎಣ್ಣೆ ಸವರಿ, ಹಿಟ್ಟನ್ನು ಹಗುರವಾಗಿ ಹರಡಿ. ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ, ಗರಿಗರಿಯಾದ ರಾಗಿ ದೋಸೆ ಸಿದ್ಧ!

ಇದನ್ನ ತಿನ್ನೋದ್ರಿಂದ ಏನ್ ಲಾಭ?

ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ತೂಕ ಇಳಿಕೆಗೆ ನೆರವಾಗುತ್ತದೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣವೇ ಹೆಚ್ಚಿಸುವುದಿಲ್ಲ, ಹೀಗಾಗಿ ಶುಗರ್ ಇರುವವರಿಗೆ ಇದು ಅತ್ಯುತ್ತಮ ಉಪಹಾರ.

ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು, ಮಕ್ಕಳು ಮತ್ತು ಹಿರಿಯರ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.

Must Read