October 15, 2026
Thursday, October 15, 2026
spot_img

ಸ್ಟಿಂಗ್‌ ಆಪರೇಷನ್‌ ಕೇಸ್‌ನಲ್ಲಿ ನನ್ನನ್ನೂ ಫಿಟ್‌ ಮಾಡಲು ಯೋಚನೆ ಮಾಡಿದ್ದರು : ಎಚ್‌ಡಿಕೆ ಬಾಂಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ನನ್ನನ್ನೂ ಸಿಲುಕಿಸುವ ಸಂಚು ರೂಪಿಸಲಾಗಿತ್ತು. ಸ್ಟಿಂಗ್‌ ಆಪರೇಷನ್‌ನ ಮೂಲ ವ್ಯಕ್ತಿಯನ್ನ ಕರೆಸಿ, ಅವರಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ, ನನ್ನನ್ನೂ ಕೇಸಲ್ಲಿ ಫಿಕ್ಸ್‌ ಮಾಡೋ ಪ್ಲ್ಯಾನ್‌ ನಡೆದಿತ್ತು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಬಾಂಬ್‌ ಸಿಡಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಈ ಹಿಂದೆಯೇ ಮಾತನಾಡಿದ್ದೆ. ವಿಜಯದಶಮಿಯ ಸಂದರ್ಭದಲ್ಲಿ ಯುದ್ಧಕ್ಕೆ ಹೋಗುವ ಸಮಯ ಬಂದಿದೆ ಎಂದು ಹೇಳಿದ್ದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮರ್ಧನ ಮಾಡಿದಂತೆ, ಅನ್ಯಾಯದ ವಿರುದ್ಧ ಹೋರಾಡುವ ಕೆಲಸವೂ ನಡೆಯಬೇಕಿದೆ ಎಂದು ಹೇಳಿದರು.

ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ಸ್ಟೇ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಅಂತ ಹೇಳಿದ್ದೆ. ಇತ್ತೀಚೆಗೆ ಸಿಎಂ ಆದೇಶದ ಮೇರೆಗೆ ಗೃಹ ಸಚಿವರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಸ್ಟಿಂಗ್‌ ಆಪರೇಷನ್‌ ಮೂಲ ವ್ಯಕ್ತಿಯಿಂದ ಹೇಳಿಕೆ ಪಡೆದು ನನ್ನನ್ನೂ ಈ ಕೇಸಲ್ಲಿ ಫಿಕ್ಸ್‌ ಮಾಡೋ ಪ್ಲ್ಯಾನ್‌ ನಡೆದಿತ್ತು ಎಂದರಲ್ಲದೇ, ನಾನೇನ್‌ ರೇವಣ್ಣನಾ? ಅವರಂತೆ ನನ್ನನ್ನ ಜೈಲಿಗೆ ಕಳುಹಿಸಲು ಸಾಧ್ಯವೇ? ಎಂದು ಕುಟುಕಿದರು.

Must Read