October 15, 2026
Thursday, October 15, 2026
spot_img

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿದೇಶ ಶಕ್ತಿಗಳ ಸಂಚು : ಸಿ.ಟಿ. ರವಿ ಕಿಡಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳುವಳಿ ಮಾಡುವುದು ತಪ್ಪಲ್ಲ. ಹೋರಾಟದ ಮೂಲಕ ದೇಶ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಹುಟ್ಟು ಹಾಕಲು ವಿದೇಶ ಹಣ ಬರುತ್ತಿದೆ. ಭಾರತ ಅಭಿವೃದ್ಧಿ ವೇಗ ತಡೆಯಲು ಸಂಚು ನಡೆಯುತ್ತಿದೆ‌. ವಿದೇಶಿ ಶಕ್ತಿಗಳು ಭಾರತದಲ್ಲಿ ಹಿಂದಿನಂತೆ ಈಸ್ಟ್ ಇಂಡಿಯಾ ಕಂಪನಿಯಂತೆ ವಸಾಹತುಗಳ ಪರಿವರ್ತಿಸುವ ಅಂತರಾಷ್ಟ್ರೀಯ ಸಂಚಿನ ಭಾಗವಾಗಿದೆ ಎಂದರು.

ಎಸ್ ಐಆರ್ ಹಾಗೂ ಚುನಾವಣ ಮುಖ್ಯ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹಿಂದೆ ಇವಿಎಂಗಳ ಬಗ್ಗೆ ವಿರೋಧ ಮಾಡಿದ್ದರು. ಅದೇ ಇವಿಎಂಗಳ ಮೂಲಕ ಇವರು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ತಮಗೆ ಅನುಕೂಲವಾದಾಗ ಇವಿಎಂ ಸರಿ ಇವೆ. ಅನಾನುಕೂಲ ಆದಾಗ ಸರಿಯಿಲ್ಲ ಎಂಬುವುದು ಎಷ್ಟರ ಮಟ್ಟಿಗೆ ಸರಿ. ಚುನಾವಣಾ ಆಯೋಗ ವಿರೋಧ ಮಾತನಾಡುವ ಕಾಂಗ್ರೆಸ್ ನಾಯಕರು ತಾವು ಗೆದ್ದ ರಾಜ್ಯದಲ್ಲಿ ರಾಜೀನಾಮೆ ನೀಡಿ ಬಳಿಕ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಲಿ ಎಂದು ಕಿಡಿಕಾರಿದರು.

Must Read