ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗಕ್ಕೆ ಪ್ರೇಮದ ಊರಲಿಯಂತಹ ಚಿಕ್ಕ ಬಜೆಟ್ ಸಿನಿಮಾಗಳೂ ಬೇಕು ಟಾಕ್ಸಿಕ್ನಂತರ ದೊಡ್ಡ ಬಜೆಟ್ ಸಿನಿಮಾಗಳೂ ಬೇಕು ಎಂದು ನಟ ಯಶ್ ಹೇಳಿದ್ದಾರೆ.
ಕನ್ನಡದಲ್ಲಿ ಕಡಿಮೆ ಬಜೆಟ್ನಲ್ಲಿ ಮೂಡಿಬಂದಿರುವ ಪ್ರೇಮದ ಊರಲಿ ಸಿನಿಮಾಗೆ ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ಸ್ ಬೆಂಬಲ ನೀಡುತ್ತಿದ್ದಾರೆ. ಜನರ ಪ್ರೀತಿಯಿಂದ ಸಿನಿಮಾ ಇನ್ನೂ ಹೌಸ್ಫುಲ್ ಆಗಿಯೇ ಇದೆ. ಈ ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿದೆ ಎಂದು ನಟ ಯಶ್ ರಾಮಾಯಣ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ಪ್ರೇಮದ ಊರಲಿ ತಂಡವನ್ನು ಭೇಟಿ ಮಾಡಿದೆ. ನೂರು ಕೋಟಿಯತ್ತ ಸಿನಿಮಾ ಓಡುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ. ಸಿನಿಮಾ ನೋಡಿದ ತಕ್ಷಣ ಖುಷಿಯಾಯ್ತು ಟೀಂ ಜೊತೆ ಮಾತನಾಡಿದ ಮೇಲೆ ಆ ತೃಪ್ತಿ ಅವರ ಕಣ್ಣಲ್ಲೂ ನೋಡಿದೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಎಲ್ಲ ರೀತಿಯ ಸಿನಿಮಾಗಳು ಬೇಕು. ಕಥೆ ಸ್ಟ್ರಾಂಗ್ ಇರಬೇಕು. ಬೇಸ್ ಗಟ್ಟಿಯಾಗಬೇಕು ಹಾಗೆಯೇ ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಸಿಂಪಲ್ ಆದ ಕಥೆ, ಅಬ್ಬರವಿಲ್ಲದ ಸ್ಕ್ರೀನ್ ಪ್ಲೇ ಇರುವ ಪ್ರೇಮದ ಊರಲಿ ಸಿನಿಮಾ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ರಚಿತಾ ರಾಮ್ ಇನ್ನೂ ಹಲವರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಸಣ್ಣ ಬಜೆಟ್ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸನ್ನು ಗಳಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವೇ ಇಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.



