ಮೇಷ
ಕೆಲವು ಪರಿಸ್ಥಿತಿ ನಿಮ್ಮಿಂದ ಬದಲಿಸಲು ಆಗದು. ಅದರ ಜತೆ ಹೊಂದಿಕೊಂಡು ಹೋಗುವುದೇ ಒಳಿತು. ಕೌಟುಂಬಿಕ ಸಮ್ಮಿಲನ.
ವೃಷಭ
ವೃತ್ತಿಯಲ್ಲಿ ಸಮಸ್ಯೆ ನೀಗಿಸಲು ಶಕ್ತರಾಗುವಿರಿ. ಆರೋಗ್ಯ ಕಾಳಜಿ ನೋಡಿಕೊಳ್ಳಿ. ಸಿಕ್ಕಿದ್ದನ್ನು ತಿನ್ನಬೇಡಿ. ಬಂಧುಮಿತ್ರರ ಜತೆ ಸುತ್ತಾಟದ ಕುಶಿ.
ಮಿಥುನ
ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದರೆ ಸ್ವಲ್ಪ ಕಾಲ ಕಾದು ನೋಡಿ. ಬಳಿಕ ಸರಿ ಹೋಗುವುದು. ದುಡುಕಿನ ಕ್ರಮ ಕೈಗೊಳ್ಳಬೇಡಿ. ಆರ್ಥಿಕ ಸ್ಥಿರತೆ.
ಕಟಕ
ವೃತ್ತಿಯಲ್ಲಿ ಸ್ಪರ್ಧೆ ಎದುರಿಸುವಿರಿ. ನಿಮ್ಮ ಮೇಲುಗೈ ಸ್ಥಾಪಿಸಲು ಕಷ್ಟ ಪಡಬೇಕಾಗುವುದು. ಮನೆಯಲ್ಲಿ ಶಾಂತ ಪರಿಸ್ಥಿತಿ. ಧನ ಪ್ರಾಪ್ತಿ.
ಸಿಂಹ
ಮಾನಸಿಕ ಶಾಂತಿ ಕದಡುವ ಬೆಳವಣಿಗೆ. ಸಮಚಿತ್ತ ಕಾಯ್ದುಕೊಳ್ಳಿ. ಕೆಲವರ ಕೆಣಕುವಿಕೆ ನಿರ್ಲಕ್ಷಿಸಿ. ವಿದ್ಯಾರ್ಥಿಗಳಿಗೆ ಆಂಶಿಕ ಯಶಸ್ಸು.
ಕನ್ಯಾ
ಹೆತ್ತವರು ಮಕ್ಕಳ ಕುರಿತು ಕಾಳಜಿ ವಹಿಸಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ನೆಂಟರಿಂದ ಟೀಕೆ ಕೇಳುವಿರಿ. ಧನಹಾನಿ.
ತುಲಾ
ಯೋಜಿಸಿದ ಕಾರ್ಯದಲ್ಲಿ ಮುಂದೆ ಹೆಜ್ಜೆ ಇಡಿ. ಸಣ್ಣ ಅಪಯಶಸ್ಸಿಗೆ ಹಿಂಜರಿಕೆ ಬೇಡ. ವ್ಯವಹಾರದಲ್ಲಿ ಸಂಪಾದನೆ ಹೆಚ್ಚಳ.
ವೃಶ್ಚಿಕ
ಆರ್ಥಿಕ ಒತ್ತಡ ನೀಗಲಿದೆ. ಸಣ್ಣ ಘಟನೆಯೊಂದು ಮಾನಸಿಕ ಕ್ಷೋಭೆ ಉಂಟು ಮಾಡಬಹುದು. ಆಪ್ತರ ಸಂಗದಲ್ಲಿ ಸಾಂತ್ವನ.
ಧನು
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ಟೀಕೆಗಳಿಗೆ ಅಂಜಿ ಉದ್ದೇಶಿತ ಕೆಲಸದಿಂದ ಹಿಂದೆ ಸರಿಯದಿರಿ. ಆಪ್ತರ ಜತೆ ಮನರಂಜನೆ.
ಮಕರ
ಅಡ್ಡಿಗಳಿಗೆ ಅಂಜಬೇಡಿ. ಅದನ್ನು ದಾಟಿ ಮುಂದೆ ಸಾಗಲು ಯತ್ನಿಸಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು.
ಕುಂಭ
ಹತಾಶೆಯ ಮನೋಭಾವ. ಮುಗಿಯದ ಸಮಸ್ಯೆ ಅದಕ್ಕೆ ಕಾರಣ. ಗ್ರಹಗತಿ ಕೆಲ ಕಾಲ ಮಾನಸಿಕ ಕಿರಿಕಿರಿ ಸೃಷ್ಟಿಸಲಿದೆ.
ಮೀನ
ಕಠಿಣ ಶ್ರಮಕ್ಕೆ ಫಲ ಸಿಗುವುದು. ಆದರೆ ಉದಾಸೀನತೆ ಬಿಡುವುದು ಮುಖ್ಯ. ಎಲ್ಲವನ್ನು ನಾಳೆಗೆ ಮುಂದೂಡುವ ಅಭ್ಯಾಸ ಬಿಟ್ಟುಬಿಡಿ.



