October 16, 2026
Friday, October 16, 2026
spot_img

ಮಾನವಕುಲದ ಅತ್ಯಂತ ಶ್ರೇಷಠ ಕಥೆ ತೆರೆ ಮೇಲೆ : ʼರಾಮಾಯಣʼ ಸಿನಿಮಾದ ಎರಡನೇ ಟ್ರೇಲರ್‌ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿತೇಶ್‌ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸಲು ತಯಾರಾಗಿದೆ. ನವರಾತ್ರಿಯ ಸಮಯದಲ್ಲಿ ಎರಡನೇ ಟ್ರೇಲರ್‌ ಲಾಂಚ್‌ ಮಾಡಿದ್ದು, ಪ್ರಭು ಶ್ರೀರಾಮನಗಾಗಿ ರಣ್‌ಬೀರ್‌ ಕಪೂರ್‌ ಮಿಂಚಿದ್ದರೆ, ರಾವಣನಾಗಿ ಯಶ್‌ ಅಬ್ಬರಿಸಿದ್ದಾರೆ.

ಇದೇ ನವೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿರುವ ಹಿನ್ನೆಲೆ ರಾಮಾಯಣ ಚಿತ್ರತಂಡವು ಎರಡನೇ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಈ ಟ್ರೇಲರ್‌ನಲ್ಲಿ ರಣಬೀರ್ ಕಪೂರ್, ಯಶ್ ವಿಭಿನ್ನ ಲುಕ್, ಶೌರ್ಯ, ಅಸುರರ ಸಂಹಾರ ಅಬ್ಬರಿಸಿದೆ.

ಇನ್ನೂ ಕುನಾಲ್ ಕಪೂರ್ ಇಂದ್ರದೇವನಾಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನವರ ಸಂರಕ್ಷಣೆಗಾಗಿ ರಾಮನ ಹೋರಾಟ, ಸೀತೆಯನ್ನು ಅಪಹರಿಸಿದ ರಾವಣ ಪ್ರತಿಜ್ಞೆ ಹಾಗೂ ಪತಿಗಾಗಿ ಸೀತೆಯ ತ್ಯಾಗ ಎಲ್ಲವೂ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದೆ. ಈ ಇಂಟರ್‌ನ್ಯಾಷನಲ್ ಟ್ರೇಲರ್ ಅನ್ನು ನಿನ್ನೆ ಬೆಂಗಳೂರಿನಲ್ಲಿ ನಡೆದ ಇವೆಂಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ರವಿ ದುಬೆ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಭಾಗವಹಿಸಿದ್ದರು.

ರಾಮಾಯಣದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನು ಸೀತೆಯನ್ನು ಅಪಹರಿಸಿದಾಗ, ಆಕೆಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ.

Must Read