ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ನಡೆದ ರಾಮಾಯಣ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್ ಅವರನ್ನು ಮುದ್ದು ಎಂದು ಕರೆದಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮಗೂ ಯಶ್ ರೀತಿ ಪ್ರೀತಿಯಿಂದ ಕರೆಯುವ ಪತಿಯೇ ಬೇಕು ಎಂದು ಹೆಣ್ಮಕ್ಕಳು ಪಟ್ಟು ಹಿಡಿದಿದ್ದಾರೆ.
https://www.instagram.com/reel/Deha7m1typn/?exln=dGExNXN5eGQ4aW92
ನನ್ನ ಸೀತೆ ಬಗ್ಗೆ ಹೇಳಲೇಬೇಕು. ನಾನು ರಾಯ ಆಗಲಿ, ರಾವಣ ಆಗಲಿ, ರಾಜಾಹುಲಿ ಆಗಲಿ, ರಾಕಿ ಭಾಯ್ ಆಗಲಿ ಮನೆಯಲ್ಲಿ ನಾನು ಅವಳಿಗೆ ಯಶ್ ಅಷ್ಟೇ. ನನ್ನ ಹುಚ್ಚು ಆಲೋಚನೆಗಳಿಗೆ ಜೀವ ಕೊಟ್ಟಿದ್ದು ರಾಧಿಕಾ. ಮನೆ ನೆಮ್ಮದಿಯಾಗಿದ್ದರೆ ಮಾತ್ರ ನಾನು ಹೊರಗೆ ಆರಾಮಾಗಿ ಕೆಲಸ ಮಾಡೋಕೆ ಸಾಧ್ಯ ಎಂದು ಹೊಗಳಿದ್ದಾರೆ.
https://www.instagram.com/reel/Dehcmn6SKpf/?dlrf=dnVhM2t3MjhjZ20y
ಫೈನಲ್ ಫೋಟೊ ವೇಳೆ ಸ್ಟೇಜ್ನ ಕೆಳಗಿದ್ದ ರಾಧಿಕಾ ಅವರನ್ನು ಮುದ್ದು ಬಾರಮ್ಮ ಇಲ್ಲಿ ಎಂದು ಸ್ಟೇಜ್ ಮೇಲೆ ಕರೆದಿದ್ದಾರೆ. ಈ ವಿಡಿಯೋ ನೋಡಿದ ಜನರೆಲ್ಲರೂ ಮದುವೆಯಾಗಿ ಎಷ್ಟುವರ್ಷವಾದರೂ ಈ ಜೋಡಿ ಹೀಗೆ ಇದೆ ಎಂದು ಹೇಳಿದ್ದಾರೆ. ಕೆಲವರು ಕಪಲ್ ಗೋಲ್ ಇದು ಎಂದು ಹೇಳಿದ್ದಾರೆ.



