October 20, 2026
Tuesday, October 20, 2026
spot_img

ದಿನಭವಿಷ್ಯ: ನಿಮ್ಮ ಕೋಪತಾಪ ನಿಯಂತ್ರಿಸಿ, ಆಪ್ತರ ಭೇಟಿ ಸಂತೋಷ ತರಲಿದೆ

ಮೇಷ.
ಇದ್ದುದರಲ್ಲಿ ತೃಪ್ತಿ ಪಡುವ ಮನಸ್ಥಿತಿ ನಿಮ್ಮದಲ್ಲ. ದೊರಕದ್ದನ್ನು ಪಡೆಯಲು ತುಡಿತ. ಜಡತ್ವ ಕಾಡಬಹುದು. ಆತ್ಮೀಯರ ಭೇಟಿ.
ವೃಷಭ
ಮನದಲ್ಲೆ ಕೊರಗುತ್ತಾ ಕೂರದಿರಿ. ಸುತ್ತಲಿನ ಸಂತೋಷದಲ್ಲಿ ಪಾಲ್ಗೊಳ್ಳಿ. ಉದಾಸೀನತೆ ತೊಡೆಯಿರಿ. ಖರ್ಚು ತುಸು ಹೆಚ್ಚಾದೀತು.
ಮಿಥುನ
ಆತ್ಮೀಯರ ಹಿತಾಸಕ್ತಿಗೆ ಆದ್ಯತೆ. ಆದರೆ ಕೋಪತಾಪ ನಿಯಂತ್ರಿಸಿ. ಸಣ್ಣ ವಿಷಯವೂ ಅಸಹನೆ ಸೃಷ್ಟಿಸಬಹುದು. ಎಲ್ಲರ ಜತೆ ಬೆರೆಯುವ ಅವಕಾಶ.
ಕಟಕ
ಖರ್ಚು ಹೆಚ್ಚಳ. ಖರೀದಿ ಹುಮ್ಮಸ್ಸಿಗೆ ತಡೆ ಹಾಕಿ. ಆರೋಗ್ಯದ ಸಮಸ್ಯೆ ಉಂಟಾದೀತು. ನಿರ್ಲಕ್ಷ್ಯ ಬೇಡ. ಆಪ್ತರ ಭೇಟಿ ಸಂತೋಷ ತರಲಿದೆ.
ಸಿಂಹ
ಏಕಾಗ್ರತೆ ಇಂದು ಕಷ್ಟ. ಮನಸ್ಸು ಗೊಂದಲದ ಗೂಡು. ಕೆಲವು ಸಮಸ್ಯೆ ನೆಮ್ಮದಿ ಕೆಡಿಸಬಹುದು. ಕಾನೂನು ತೊಡಕಿಗೆ ಸಿಲುಕಿಕೊಳ್ಳದಿರಿ.
ಕನ್ಯಾ
ನಿಮ್ಮ ಬದುಕಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಬೇಕಾಗಿದೆ. ಉದ್ವಿಗ್ನತೆ ಹೆಚ್ಚು. ಶಾಂತ ಮನಸ್ಸಿನಿಂದ ತೀರ್ಮಾನ ತಾಳಿದರೆ ಒಳಿತು.
ತುಲಾ
ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಕೇಳಿದ್ದೆಲ್ಲ ನಂಬಬೇಡಿ. ನಿಮ್ಮ ಮನ ಕೆಡಿಸುವ ವ್ಯಕ್ತಿಗಳು ನಿಮ್ಮ ಸುತ್ತಲಿದ್ದಾರೆ. ಆತುರದ ತೀರ್ಮಾನವೂ ಬೇಡ.
ವೃಶ್ಚಿಕ
ಆರ್ಥಿಕ ಒತ್ತಡ. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸಬಹುದು. ಅವರ ಮಾತಿಗೆ ಕಿವಿ ಕೊಡಬೇಡಿ. ಎಲ್ಲರನ್ನು ಕುರುಡಾಗಿ ನಂಬಬೇಡಿ.
ಧನು
ಮನೆಯಲ್ಲಿ ಏರುಪೇರಿನ ಪರಿಸ್ಥಿತಿ. ಶಾಂತವಾಗಿ ಪರಿಸ್ಥಿತಿ ನಿಭಾಯಿಸಿ. ಆಹಾರ ಪಥ್ಯ ಪಾಲಿಸಿ, ಇಲ್ಲವಾದರೆ ಹೊಟ್ಟೆ ಕೆಡಬಹುದು.
ಮಕರ
ಎಲ್ಲರಿಂದ ದೂರವಾಗಿ ಇರುವ ಮನಸ್ಥಿತಿ. ಸುತ್ತಲಿನ ಪರಿಸ್ಥಿತಿ ನಿಮ್ಮ ನಿಲುವು ಬದಲಿಸಲಿದೆ. ಆರ್ಥಿಕ ಬಿಕ್ಕಟ್ಟು ನಿವಾರಣೆ.
ಕುಂಭ
ಪ್ರೀತಿ ಹುಡುಕಾಟಕ್ಕೆ ಇದು ಸಕಾಲವಲ್ಲ. ನಿರಾಶೆ ಉಂಟಾದೀತು. ಹಿನ್ನಡೆಗೆ ಎದೆಗುಂದದಿರಿ. ಒಳ್ಳೆ ಕಾಲ ನಿಮಗೆ ಬರಲಿದೆ. ತಾಳ್ಮೆಯಿಂದ ಕಾಯಿರಿ.
ಮೀನ
ನಿಮ್ಮ ಸುತ್ತ ಗೊಂದಲದ ಪರಿಸ್ಥಿತಿ. ಒಳಿತು-ಕೆಡುಕಿನ ಸಂಘರ್ಷ ಮನದಲ್ಲಿ ನಡೆದೀತು. ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ.

Must Read