ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕಡಲತಡಿಗೆ ಜನಸಾಗರವೇ ಹರಿದುಬರುತ್ತಿದೆ.
ಈ ನಡುವೆ ಒಂದೆಡೆ ದಸರಾ ವೀಕ್ಷಣೆಗೆ ಬರುವವರಿಗೆ ಯಾವುದೇ ಅಡಚಣೆಯಾಗದಂತೆ ಸ್ಥಳಿಯಾಡಳಿತ, ದೇವಸ್ಥಾನದ ಆಡಳಿತ ಸಕಲ ವ್ಯವಸ್ಥೆ ಮಾಡಿದ್ದರೆ, ಇನ್ನೊಂದೆಡೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಬಾರದಂತೆ ನಗರ ಪೊಲೀಸರು ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಮತ್ತು ಟ್ಯಾಬ್ಲೋಗಳು ಸಾಗುವ ಕಾರಣ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆಅನುಕೂಲವಾಗುವಂತೆ ಮಂಗಳೂರು ನಗರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಿದ್ದಾರೆ. ಎಲ್ಲೆಲ್ಲಿ ಸಂಚಾರ ವ್ಯವಸ್ಥೆ ಮಾರ್ಪಾಡು ಮಾಡಲಾಗಿದೆ ಎಂಬ ವಿವರ ಇಲ್ಲಿದೆ…
ಅ. 21ರಂದು ಬುಧವಾರ ಸಂಜೆ ನಾಲ್ಕು ಗಂಟೆಯಿಂದ ಅ.22ರ ಬೆಳಗ್ಗೆ ಆರು ಗಂಟೆಯವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ ಮತ್ತು ಟ್ಯಾಬ್ಲೋಗಳು ಕುದ್ರೋಳಿ ದೇವಸ್ಥಾನದ ದ್ವಾರ- ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ (ಲೇಡಿಹಿಲ್) – ಲಾಲ್ಭಾಗ್ – ಬಳ್ಳಾಲ್ ಭಾಗ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ ವೃತ್ತ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಕಾರ್ ಸ್ಟ್ರೀಟ್- ನ್ಯೂಚಿತ್ರಾ ಜಂಕ್ಷನ್ – ಕುದ್ರೋಳಿ ದ್ವಾರದ ಮೂಲಕ ದೇವಸ್ಥಾನಕ್ಕೆ ಸಂಚರಿಸಲಿರುತ್ತದೆ. ಮಧ್ಯಾಹ್ನ 2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕಿದೆ. ಇದರ ಜೊತೆಗೆ ಮೆರವಣಿಗೆ ಸಾಗುವ ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು ಎಂದು ಮಂಗಳೂರು ನಗರ ಪೊಲೀಸರು ಸೂಚನೆ ನೀಡಿದ್ದಾರೆ.

ಕುದ್ರೋಳಿ ದಸರಾ ಮೆರವಣಿಗೆಯ ಸಮಯ ವಾಹನ ಸಂಚಾರದ ಮಾರ್ಪಾಡಿನ ವಿವರ..
- ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಲೇಡಿಹಿಲ್ ಮುಖಾಂತರ ಮಂಗಳೂರು ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗವಾದ ಕುಂಟಿಕಾನ- ಕೆಪಿಟಿ – ನಂತೂರು ಮುಖೇನ ಮಂಗಳೂರು ನಗರಕ್ಕೆ ಸಂಚರಿಸುವುದು.
- ಬಂಟ್ಸ್ ಹಾಸ್ಟೆಲ್ ನಿಂದ ಪಿವಿಎಸ್ ಮುಖಾಂತರ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ -ಬಟ್ಟಗುಡ್ಡ -ಕೆಪಿಟಿ ಮುಖೇನ ಅಥವಾ ಬಂಟ್ಸ್ ಹಾಸ್ಟೆಲ್- ಭಾರತ್ ಬೀಡಿ-ಮಲ್ಲಿಕಟ್ಟೆ ಮಾರ್ಗವಾಗಿ ಸಂಚರಿಸುವುದು.
- ಕೆಎಸ್ಆರ್ಟಿಸಿ ಜಂಕ್ಷನ್ ನಿಂದ ಲಾಲ್ ಬಾಗ್ ಕಡೆಗೆ ಬರುವ ವಾಹನಗಳು ಕೆ.ಎಸ್.ಅರ್.ಟಿ.ಸಿ ಜಂಕ್ಷನ್ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ -ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸುವುದು.
- ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ನಿಂದ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುವುದು.
- ಹಂಪನಕಟ್ಟೆ ಕಡೆಯಿಂದ ಕೆ.ಎಸ್.ಆರ್ ರಸ್ತೆ- ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟೆ- ಎಲ್.ಹೆಚ್.ಹೆಚ್ – ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸುವುದು.
- ನ್ಯೂ ಚಿತ್ರಾ ಜಂಕ್ಷನ್ನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
- ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್ -ದುರ್ಗಾಮಹಲ್-ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
ಮೆರವಣಿಗೆ ನೋಡಲು ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಎಲ್ಲಿ?
- ಕರಾವಳಿ ಮೈದಾನ ಪಾರ್ಕಿಂಗ್
- ಅಳಕೆ ಮಾರ್ಕೆಟ್ ಪಾರ್ಕಿಂಗ್
- ಉರ್ವ ಮಾರ್ಕೆಟ್ ಮೈದಾನ
- ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
- ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
- ಪೊಂಪೈ ಚರ್ಚ್ ಪಾರ್ಕಿಂಗ್
- ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್
- ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್
- ಬಿ ಇ ಎಂ ಸ್ಕೂಲ್ ಪಾರ್ಕಿಂಗ್
- ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್
- ಹೊಟೇಲ್ ವಿಮಲೇಶ್ ಪಾರ್ಕಿಂಗ್



