ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಪ್‌ಲೋಡ್ ಮಾಡಲು, ರೀಲ್ಸ್‌ನಿಂದ ಲೈಕ್ಸ್ ಪಡೆಯಲು ಜನ ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಕೆಲವರು ಲೈಕ್ಸ್‌ಗಾಗಿ ಹಸಿಮೆಣಸಿನಕಾಯಿಯನ್ನು ತಿಂದು ಮುಗಿಸಿದರೆ, ಹಲವರು ನೀರಿನಲ್ಲಿ ಹಿಂದು ಮುಂದೆ ನೋಡದೇ ಜಂಪ್ ಮಾಡುತ್ತಾರೆ. ತಮ್ಮ ಜೊತೆಯಲ್ಲಿ ಯಾರಿದ್ದಾರೆ, ಹೇಗಿದ್ದಾರೆ ಎನ್ನುವುದನ್ನೂ ಅರ್ಥಮಾಡಿಕೊಳ್ಳದೇ ಕಾಣದ ಜನರನ್ನು ಮೆಚ್ಚಿಸುವ ಮಾಯೆಗೆ ಶರಣಾಗುತ್ತಾರೆ.
ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂದೆ ತಾಯಿ ಮಗುವಿನ ಜೊತೆಗೆ ಬೀಚ್‌ಗೆ ಪ್ರವಾಸ ಬಂದಿದ್ದಾರೆ. ಬೀಚ್‌ನಲ್ಲಿ ತಂದೆ ವಿಡಿಯೋ ಮಾಡುತ್ತಾರೆ. ತಾಯಿಗೂ ಸೆಲ್ಫಿ ವಿಡಿಯೋಗೆ ಸೇರಿಕೊಳ್ಳುವ ಆಸೆಯಾಗುತ್ತದೆ. ಪುಟಾಣಿ ಕಂದನ ಕೈ ಹಿಡಿದುಕೊಂಡು ಬೀಚ್‌ನಲ್ಲಿ ಆಡಿಸುತ್ತಿದ್ದ ತಾಯಿ ಮಗುವಿನ ಕೈ ಬಿಟ್ಟು ವಿಡಿಯೋಗಾಗಿ ಬರುತ್ತಾಳೆ. ಈ ವೇಳೆ ಎರಡು ದೊಡ್ಡ ದೊಡ್ಡ ಅಲೆಗಳು ಬರುತ್ತವೆ. ಮಗು ಬಿದ್ದು ಉಪ್ಪು ನೀರು ಕುಡಿಯುತ್ತದೆ. ಅಷ್ಟ್ರರಲ್ಲಿ ವ್ಯಕ್ತಿಯೊಬ್ಬರು ಆಗಮಿಸಿ ಮಗುವನ್ನು ರಕ್ಷಿಸುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಮಕ್ಕಳಿಲ್ಲದೆ ಜನ ಅಳುತ್ತಾರೆ. ಮಕ್ಕಳು ಬೇಕೆಂದು ನೂರಾರು ದೇವರ, ಆಸ್ಪತ್ರೆಯ ಮೊರೆ ಹೋಗುತ್ತಾರೆ. ಅಂತಹದರಲ್ಲಿ ಮಗುವಿನ ಪ್ರಾಣ ಪಣಕ್ಕೆ ಇಟ್ಟು ರೀಲ್ಸ್ ಮಾಡುವ ದಂಪತಿಗೆ ಮಕ್ಕಳ್ಯಾಕೆ ಎಂದು ಜನ ಗರಂ ಆಗಿದ್ದಾರೆ.
ರೀಲ್ಸ್ ಮಾಡುವ ಜನರು ಮಕ್ಕಳು ಮಾಡಿಕೊಳ್ಳುವುದನ್ನು ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಬೇರೆ ದೇಶಗಳಲ್ಲಿ ಇಂತಹ ವಿಡಿಯೋಗಳು ಕಂಡಿದ್ದರೆ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು. ಇನ್ಸ್ಟಾಗ್ರಾಮ್‌ನ್ನು ಬ್ಯಾನ್ ಮಾಡಬೇಕು. ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಬೇಕು ಎನ್ನುವ ಕಮೆಂಟ್‌ಗಳು ಬಂದಿವೆ.



