ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂದಲು ಉದುರುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರವಾಗಿ ನೈಸರ್ಗಿಕ ತೈಲಗಳಾದ ರೋಸ್ಮರಿ ಎಣ್ಣೆ ಮತ್ತು ಹರಳೆಣ್ಣೆ ಮುಂಚೂಣಿಯಲ್ಲಿವೆ. ಆದರೆ ಇವೆರಡರಲ್ಲಿ ಯಾವುದು ನಿಜಕ್ಕೂ ಉತ್ತಮ ಎಂಬ ಗೊಂದಲ ಅನೇಕರಲ್ಲಿದೆ.
ರೋಸ್ಮರಿ ಎಣ್ಣೆಯ ವಿಶೇಷತೆಗಳು
ರೋಸ್ಮೆರಿ ಎಣ್ಣೆಯು ಅತ್ಯಂತ ಹಗುರವಾದ ಸಸ್ಯಜನ್ಯ ತೈಲವಾಗಿದೆ. ಇದು ನೆತ್ತಿಯ ಭಾಗದಲ್ಲಿ ರಕ್ತನಾಳಗಳ ಚಲನೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಕೂದಲು ಬೇರಿನಿಂದ ಬಲಗೊಳ್ಳುತ್ತದೆ ಹಾಗೂ ಹೊಸ ಕೂದಲು ಹುಟ್ಟಿಕೊಳ್ಳಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ತಲೆಹೊಟ್ಟು ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿ.
ಹರಳೆಣ್ಣೆಯ ಪ್ರಯೋಜನಗಳು
ಮತ್ತೊಂದೆಡೆ ಹರಳೆಣ್ಣೆಯು ಅತ್ಯಂತ ದಪ್ಪ ಹಾಗೂ ಸಾಂದ್ರವಾದ ಎಣ್ಣೆಯಾಗಿದೆ. ಇದರಲ್ಲಿ ವಿಟಮಿನ್ ‘ಇ’ ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಹೇರಳವಾಗಿವೆ. ಇದು ಕೂದಲಿಗೆ ಆಳವಾದ ತೇವಾಂಶವನ್ನು ನೀಡಿ, ಕೂದಲು ಒಡೆಯುವುದನ್ನು ತಪ್ಪಿಸುತ್ತದೆ. ಹುಬ್ಬು ಮತ್ತು ಕೂದಲು ದಪ್ಪಗಾಗಿ ಬೆಳೆಯಲು ಹರಳೆಣ್ಣೆಯನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ.
ಯಾವುದು ಉತ್ತಮ?
ನಿಮಗೆ ಹೊಸ ಕೂದಲು ಬೇಕಿದ್ದರೆ ಮತ್ತು ನೆತ್ತಿಯ ಆರೋಗ್ಯ ಕಾಪಾಡಿಕೊಳ್ಳಬೇಕಿದ್ದರೆ ರೋಸ್ಮರಿ ಎಣ್ಣೆ ಉತ್ತಮ. ಅದೇ ಕೂದಲು ಒಣಗುವುದನ್ನು ತಪ್ಪಿಸಿ, ತುಂಡಾಗದಂತೆ ತಡೆಯಲು ಹರಳೆಣ್ಣೆ ಬೆಸ್ಟ್. ಅತ್ಯುತ್ತಮ ಫಲಿತಾಂಶಕ್ಕಾಗಿ ಇವೆರಡನ್ನೂ ಸರಿಯಾದ ಪ್ರಮಾಣದಲ್ಲಿ ಜೊತೆಯಾಗಿ ಬಳಸುವುದು ಉತ್ತಮ.



