October 26, 2026
Monday, October 26, 2026
spot_img

ಅ. 31ಕ್ಕೆ ಗೃಹಲಕ್ಷ್ಮಿ ಸಮೀಕ್ಷೆ ಮುಕ್ತಾಯ: ಗಡುವು ವಿಸ್ತರಣೆ ಇಲ್ಲ ಎಂದ ಬೆಸ್ಕಾಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಮನೆ ಮನೆ ಸಮೀಕ್ಷೆಗೆ ನೀಡಿರುವ ಗಡುವು ಅ.31ಕ್ಕೆ ಮುಕ್ತಾಯವಾಗಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ವಿನಂತಿಸಿದೆ.

ಮನೆಗಳಿಗೆ ಬಂದಾಗ ಮನೆಯಲ್ಲಿ ಇಲ್ಲದವರು, ಬೀಗ ಹಾಕಿರುವವರು, ಕೆಲಸ ಕಚೇರಿಗೆ ತೆರಳಿದವರು ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಬೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದೆ.

ಬೆಸ್ಕಾಂನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 7429773 ಲಕ್ಷ ಗ್ರಾಹಕರು ಗೃಹ ಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ 7317687 ಲಕ್ಷ ಗ್ರಾಹಕರ ಸಮೀಕ್ಷೆ (ಶೇ. 98.49) ಅಕ್ಟೋಬರ್‌ 22ಕ್ಕೆ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಭಾಗಿಯಾಗದ ಜನರು ಕಚೇರಿಗೆ ಆಗಮಿಸಿ ದಾಖಲಾತಿ ಸಲ್ಲಿಸಬೇಕಿದೆ. ಮತ್ತೆ ಗಡುವು ವಿಸ್ತರಣೆ ಇಲ್ಲ ಎಂದು ಬೆಸ್ಕಾಂ ಸ್ಪಷ್ಟವಾಗಿ ಹೇಳಿದೆ.

Must Read