ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಐ ವಿಟ್ನೆಸ್ಗಳು ಕೋರ್ಟ್ನಲ್ಲಿ ಸಾಕ್ಷಿ ಹೇಳಲಿದ್ದಾರೆ. ಹೌದು, ಕೊಲೆ ನಡೆದ ಸ್ಥಳವಾದ ಪಟ್ಟಣಗೆರೆ ಶೆಡ್ನಲ್ಲಿದ್ದ ಪುನೀತ್ ಹಾಗೂ ಕಿರಣ್ ಸಾಕ್ಷಿ ವಿಚಾರಣೆಗೆ ಹಾಜರಾಗಲಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ವೇಳೆ ಸ್ಥಳದಲ್ಲಿಯೇ ಇದ್ದ ಈ ಇಬ್ಬರು ಇಂದು 59ನೇ ಸೆಷನ್ಸ್ ಕೋರ್ಟ್ಗೆ ಹಾಜರಾಗಿ ಸಾಕ್ಷಿ ಹೇಳಲಿದ್ದಾರೆ. ಪಟ್ಟಣಗೆರೆ ಶೆಡ್ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಸಮನ್ಸ್ ನೀಡಲಾಗಿತ್ತು. ರೇಣುಕಾಸ್ವಾಮಿ ಕಿಡ್ನಾಪ್, ಹಲ್ಲೆ, ಮರ್ಡರ್ ಎಲ್ಲವನ್ನೂ ಕಣ್ಣಾರೆ ಕಂಡಿರುವ ಈ ಸಾಕ್ಷಿಗಳು ಯಾವೆಲ್ಲಾ ಮಾಹಿತಿ ನೀಡುತ್ತಾರೆ ಎನ್ನುವ ಕೇಸ್ಗೆ ತುಂಬಾ ಮುಖ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಸಂಬಂಧ ಮಹತ್ವ ಪಡೆದಿರುವ ಇಬ್ಬರು ಸಾಕ್ಷಿಗಳ ಹೇಳಿಕೆ ಕೇಸ್ಗೆ ಯಾವ ರೀತಿ ತಿರುವು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಾಸಿಕ್ಯೂಷನ್ ಪರ ವಕೀಲರು ಪುನೀತ್ ಹಾಗೂ ಕಿರಣ್ ವಿಚಾರಣೆ ನಡೆಸಲಿದ್ದಾರೆ. ಸದ್ಯ ಐ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.



