October 27, 2026
Tuesday, October 27, 2026
spot_img

ರೇಣುಕಾಸ್ವಾಮಿ ಮರ್ಡ*ರ್‌ ಕೇಸ್‌ : ಪಟ್ಟಣಗೆರೆ ಶೆಡ್‌ನಲ್ಲಿದ್ದ ಇಬ್ಬರು ಐ ವಿಟ್ನೆಸ್‌ಗಳಿಂದ ಸಾಕ್ಷಿ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಐ ವಿಟ್ನೆಸ್‌ಗಳು ಕೋರ್ಟ್‌ನಲ್ಲಿ ಸಾಕ್ಷಿ ಹೇಳಲಿದ್ದಾರೆ. ಹೌದು, ಕೊಲೆ ನಡೆದ ಸ್ಥಳವಾದ ಪಟ್ಟಣಗೆರೆ ಶೆಡ್‌ನಲ್ಲಿದ್ದ ಪುನೀತ್‌ ಹಾಗೂ ಕಿರಣ್‌ ಸಾಕ್ಷಿ ವಿಚಾರಣೆಗೆ ಹಾಜರಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆಯ ವೇಳೆ ಸ್ಥಳದಲ್ಲಿಯೇ ಇದ್ದ ಈ ಇಬ್ಬರು ಇಂದು 59ನೇ ಸೆಷನ್ಸ್ ಕೋರ್ಟ್ಗೆ ಹಾಜರಾಗಿ ಸಾಕ್ಷಿ ಹೇಳಲಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಸಮನ್ಸ್‌ ನೀಡಲಾಗಿತ್ತು. ರೇಣುಕಾಸ್ವಾಮಿ ಕಿಡ್ನಾಪ್‌, ಹಲ್ಲೆ, ಮರ್ಡರ್‌ ಎಲ್ಲವನ್ನೂ ಕಣ್ಣಾರೆ ಕಂಡಿರುವ ಈ ಸಾಕ್ಷಿಗಳು ಯಾವೆಲ್ಲಾ ಮಾಹಿತಿ ನೀಡುತ್ತಾರೆ ಎನ್ನುವ ಕೇಸ್‌ಗೆ ತುಂಬಾ ಮುಖ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಸಂಬಂಧ ಮಹತ್ವ ಪಡೆದಿರುವ ಇಬ್ಬರು ಸಾಕ್ಷಿಗಳ ಹೇಳಿಕೆ ಕೇಸ್​ಗೆ ಯಾವ ರೀತಿ ತಿರುವು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಾಸಿಕ್ಯೂಷನ್ ಪರ ವಕೀಲರು ಪುನೀತ್ ಹಾಗೂ ಕಿರಣ್ ವಿಚಾರಣೆ ನಡೆಸಲಿದ್ದಾರೆ. ಸದ್ಯ ಐ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

Must Read