ಹೊಸದಿಗಂತ ವರದಿ ಕಲಬುರಗಿ:
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಮೊದಲ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಶಶೀಲ್ ಜಿ. ನಮೋಶಿ 7,243 ಮತಗಳನ್ನು ಪಡೆದರೆ, ಶರಣಪ್ಪ ಮಟ್ಟೂರ 5,714 ಮತಗಳನ್ನು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣ ಜಮಾದಾರ 18, ಜನತಾ ದಳ (ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ 21 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ನಾಗಣ್ಣ ಮೋತಕಪಲ್ಲಿ 34, ಟಿ.ಕೆ. ದಾಸರ 1, ಮಹಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ 3, ರಾಜಕುಮಾರ ಕೆ. ಕಲಬುರಗಿ 75, ರಾಜು ದೇವಪ್ಪ ಸೊನ್ನ 55, ಶರಣು ಪಿ. ಸುಗೂರು 5, ಶಶಿಧರ ಬಸವರಾಜ 4, ಶಿವಶಂಕರ ಅಣ್ಣಪ್ಪ ತರನಳ್ಳಿ 5 ಹಾಗೂ ಡಾ. ಸುರೇಶ ದಾವೀದಪ್ಪ 5 ಮತಗಳನ್ನು ಪಡೆದಿದ್ದಾರೆ.
ಮೊದಲ ಸುತ್ತಿನಲ್ಲಿ ಒಟ್ಟು 14,001 ಮತಗಳನ್ನು ಎಣಿಕೆ ಮಾಡಲಾಗಿದ್ದು, ಈ ಪೈಕಿ 13,183 ಮತಗಳು ಸಿಂಧುವಾಗಿವೆ. 818 ಮತಗಳು ತಿರಸ್ಕೃತಗೊಂಡಿವೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, ಅವರಲ್ಲಿ 30,250 ಮಂದಿ ಮತ ಚಲಾಯಿಸಿದ್ದಾರೆ. ಇದೀಗ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಎರಡನೇ ಸುತ್ತು ಆರಂಭವಾಗಿದೆ.



