October 27, 2026
Tuesday, October 27, 2026
spot_img

ರಾಮಲಲಾ ದರುಶನಕ್ಕೆ ಹೊಸ ಟೈಮಿಂಗ್‌: ನ. 1ರಿಂದ ಅಯೋಧ್ಯೆ ರಾಮಮಂದಿರದ ವೇಳಾಪಟ್ಟಿ ಬದಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಋತುಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ರಾಮಲಲಾ ದರುಶನ ಮತ್ತು ಪೂಜಾ ಸೇವೆಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿರುವ ಹೊಸ ವೇಳಾಪಟ್ಟಿ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಚಳಿಗಾಲದ ದಿನಚರಿಗೆ ಅನುಗುಣವಾಗಿ ದೇವಾಲಯದ ಗರ್ಭಗುಡಿ ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಭಕ್ತರು ದರುಶನಕ್ಕೆ ತೆರಳುವ ಮುನ್ನ ಹೊಸ ಸಮಯವನ್ನು ಗಮನಿಸುವುದು ಅಗತ್ಯವಾಗಿದೆ.

ಬೆಳಗಿನ ಆರತಿ, ದರುಶನದ ಸಮಯದಲ್ಲಿ ಬದಲಾವಣೆ

ಈವರೆಗೆ ಬೆಳಗಿನ ಜಾವ 3.45ಕ್ಕೆ ತೆರೆಯುತ್ತಿದ್ದ ಗರ್ಭಗುಡಿ ಇನ್ನು ಮುಂದೆ 4 ಗಂಟೆಗೆ ತೆರೆಯಲಿದೆ. ರಾತ್ರಿ 10.30ಕ್ಕೆ ಮುಚ್ಚುತ್ತಿದ್ದ ದೇವಾಲಯದ ಬಾಗಿಲುಗಳು ಹೊಸ ವೇಳಾಪಟ್ಟಿಯಂತೆ ರಾತ್ರಿ 10 ಗಂಟೆಗೆ ಮುಚ್ಚಲಿವೆ. ಮುಖ್ಯ ಅರ್ಚಕ ಆಚಾರ್ಯ ಕೇಶವ್ ನೀಡಿರುವ ಮಾಹಿತಿಯ ಪ್ರಕಾರ, ಮಂಗಳ ಆರತಿ ಬೆಳಗ್ಗೆ 4.30ರಿಂದ 4.40ರವರೆಗೆ ನಡೆಯಲಿದೆ. ಬಳಿಕ ಗರ್ಭಗುಡಿ ಬೆಳಗ್ಗೆ 6.30ರವರೆಗೆ ಮುಚ್ಚಿರುತ್ತದೆ. ಶೃಂಗಾರ ಆರತಿ 6.30ಕ್ಕೆ ನಡೆಯಲಿದ್ದು, ಭಕ್ತರಿಗೆ ದರುಶನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದೆ.

ಇದನ್ನೂ ಓದಿ:

ಮಧ್ಯಾಹ್ನದ ವಿಶ್ರಾಂತಿ ಅವಧಿ ವಿಸ್ತರಣೆ

ರಾಮಲಲಾನ ಮಧ್ಯಾಹ್ನದ ವಿಶ್ರಾಂತಿ ಸಮಯವನ್ನು ಹೆಚ್ಚಿಸಲಾಗಿದೆ. ಹಿಂದಿನ ವೇಳಾಪಟ್ಟಿಯಲ್ಲಿ ಮಧ್ಯಾಹ್ನ 12.30ರಿಂದ 12.55ರವರೆಗೆ ಇದ್ದ ವಿಶ್ರಾಂತಿ, ಹೊಸ ವ್ಯವಸ್ಥೆಯಲ್ಲಿ 12.30ರಿಂದ 1.30ರವರೆಗೆ ಇರಲಿದೆ. ಅಗತ್ಯ ಪೂಜಾ ವಿಧಿವಿಧಾನಗಳ ಬಳಿಕ ಮಧ್ಯಾಹ್ನ 1.35ಕ್ಕೆ ದರುಶನ ಪುನರಾರಂಭವಾಗಿ ಸಂಜೆ 4 ಗಂಟೆಯವರೆಗೆ ಮುಂದುವರಿಯಲಿದೆ.

ಸಂಜೆ 4ರಿಂದ 4.10ರವರೆಗೆ ಗರ್ಭಗುಡಿ ಮುಚ್ಚಿರುತ್ತದೆ. ನಂತರ ಸಂಜೆ 6.45ರವರೆಗೆ ದರುಶನಕ್ಕೆ ಅವಕಾಶವಿದ್ದು, 7 ಗಂಟೆಗೆ ಸಂಧ್ಯಾ ಆರತಿ ನಡೆಯಲಿದೆ. ರಾತ್ರಿ 8 ಗಂಟೆಯವರೆಗೆ ದರುಶನ ಮುಂದುವರಿದು, ಬಳಿಕ 8.30ರಿಂದ ರಾತ್ರಿ 10ರವರೆಗೆ ಮತ್ತೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ.

Must Read

Skip to toolbar