October 28, 2026
Wednesday, October 28, 2026
spot_img

ಯುಪಿ ಕ್ರೈಮ್ ಬಗ್ಗೆ ಕಾಮಿಡಿಯನ್ ಹರ್ಷ್ ಗುಜ್ರಾಲ್ ನೀಡಿದ ಪಂಚ್‌ಗೆ ಸಿಎಂ ಯೋಗಿ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ‘ಟೈಮ್ಸ್ ಆಫ್ ಇಂಡಿಯಾ ಯೂತ್ ಐಕಾನ್ಸ್ ಸಮ್ಮಿಟ್ & ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಒಂದು ತಮಾಷೆಯ ಹಾಗೂ ಕೌತುಕದ ಸನ್ನಿವೇಶ ನಡೆಯಿತು. ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಹರ್ಷ್ ಗುಜ್ರಾಲ್ ವೇದಿಕೆ ಮೇಲೆ ಆಡಿದ ಮಾತುಗಳು, ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೇ ನಗಿಸುವಂತೆ ಮಾಡಿದವು.

ವೇದಿಕೆಯಲ್ಲಿ ಮಾತನಾಡುತ್ತಾ ಹರ್ಷ್ ಗುಜ್ರಾಲ್ ತಮಗಾದ ಒಂದು ಹಾಸ್ಯಸ್ಪದ ಅನುಭವವನ್ನು ಹಂಚಿಕೊಂಡರು. ಲಕ್ನೋಗೆ ಬಂದಾಗ ಅವರು ರಸ್ತೆಯಲ್ಲಿದ್ದ ಬಾಳೆಹಣ್ಣು ಮಾರುವ ಒಬ್ಬ ವ್ಯಾಪಾರಿಯನ್ನು ಮಾತನಾಡಿಸಿದ್ದರು. “ಅಣ್ಣಾ, ಈಗ ಉತ್ತರ ಪ್ರದೇಶದಲ್ಲಿ ಕ್ರೈಮ್ ಕಡಿಮೆ ಆಗಿದೆಯಾ?” ಎಂದು ಹರ್ಷ್ ಕೇಳಿದ್ದರಂತೆ. ಅದಕ್ಕೆ ಆ ವ್ಯಾಪಾರಿ, “ಹೌದಣ್ಣ, ಇಲ್ಲಿ ಕ್ರೈಮ್ ಸಂಪೂರ್ಣವಾಗಿ ನಿಂತು ಹೋಗಿದೆ. ಯಾಕಂದರೆ ಆ ರೌಡಿಸಂ ಕೆಲಸ ಮಾಡ್ತಿದ್ದವನೇ ನಾನು! ಈಗ ಆ ಕೆಲಸ ಬಿಟ್ಟು ಬಾಳೆಹಣ್ಣು ಮಾರುತ್ತಿದ್ದೇನೆ” ಎಂದು ಉತ್ತರ ಕೊಟ್ಟಿದ್ದನಂತೆ.

https://www.instagram.com/reel/DfBb0h_h0vp/?utm_source=ig_web_button_share_sheet

ಈ ಪಂಚ್‌ಲೈನ್ ಕೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಸಿಎಂ ಯೋಗಿ ಆದಿತ್ಯನಾಥ್ ಮನಸಾರೆ ನಕ್ಕುಬಿಟ್ಟರು. ಹರ್ಷ್ ಅವರ ಈ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ಯೋಗಿ ಆದಿತ್ಯನಾಥ್ ಅವರು ನಗುತ್ತಲೇ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಸದಾ ಗಂಭೀರ ಕಾಣಿಸಿಕೊಳ್ಳುವ ಮುಖ್ಯಮಂತ್ರಿಗಳು ಈ ರೀತಿಯಾಗಿ ಮನಬಿಚ್ಚಿ ನಕ್ಕಿದ್ದು ಸಭೆಯಲ್ಲಿದ್ದ ಪ್ರೇಕ್ಷಕರಿಗೂ ತುಂಬಾ ಖುಷಿ ನೀಡಿತು.

ಈ ಸುಂದರ ಮತ್ತು ತಮಾಷೆಯ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉತ್ತರ ಪ್ರದೇಶ ಸರ್ಕಾರವು ಅಪರಾಧದ ವಿರುದ್ಧ ತಳೆದಿರುವ ‘ಝೀರೋ ಟಾಲರೆನ್ಸ್’ ನೀತಿಯನ್ನು ಕಾಮಿಡಿಯನ್ ತಮಗೆ ಸರಿ ಹೊಂದುವ ರೀತಿಯಲ್ಲಿ ತಮಾಷೆಯಾಗಿ ಮಂಡಿಸಿದ್ದಾರೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಕಾಮಿಡಿ ಜೊತೆಗೆ ಸರ್ಕಾರದ ಕಟ್ಟುನಿಟ್ಟಿನ ಆಡಳಿತ ವೈಖರಿಯನ್ನು ಜನರಿಗೆ ತಲುಪಿಸಿದ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

Must Read

Skip to toolbar