ಹೊಸದಿಗಂತ ವರದಿ ಸುಳ್ಯ:
ದೇಗುಲ ನಿರ್ಮಾಣಕ್ಕಿದ್ದ ಸ್ಥಳವನ್ನು ವಕ್ಫ್ ಬೋರ್ಡ್ ಗೆ ಅಕ್ರಮವಾಗಿ ದಫನ ಭೂಮಿಯಾಗಿ ಆದೇಶಗೈದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯು ಹಿಂದು ಹಿತರಕ್ಷಣಾ ವೇದಿಕೆ ಮುರುಳ್ಯ ವತಿಯಿಂದ ಬುಧವಾರ ಮುರುಳ್ಯ ಗ್ರಾಮ ಪಂಚಾಯತ್ ಬಳಿಯ ವಿಶಾಲವಾದ ಮೈದಾನದಲ್ಲಿ ನಡೆಯಿತು.

ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ಊರಿನ ರಕ್ತೇಶ್ವರಿ ದೇವಿಯ ದೇಗುಲ ನಿರ್ಮಾಣದ ಸ್ಥಳವನ್ನು ಅಕ್ರಮವಾಗಿ ವಕ್ಫ್ ಬೋರ್ಡ್ ಗೆ ದಫನ ಭೂಮಿಯಾಗಿ ನೀಡಿದ್ದು ಕಾನೂನು ಉಲ್ಲಂಘನೆಯಾಗಿದೆ, ಈ ಬಗ್ಗೆ ಕಾನೂನು ಹೋರಾಟ ಹಾಗೂ ಅಧಿಕಾರಿಗಳ ಲಂಚಬಾಕತನದ ವಿರುದ್ದ ಹೋರಾಟ ನಡೆಸುವುದಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ಮೋಹನ್ ದಾಸ್ ಪಲ್ಲೋಡಿ, ಕಿಶೋರ್ ಕುಮಾರ್ ಶಿರಾಡಿ, ವಿನಯ ಕುಮಾರ್ ಕಂದಡ್ಕ, ನವೀನ್ ನೆರಿಯಾ,ಲೋಕಯ್ಯ ಪರವ ಸೇರಿದಂತೆ ಮತ್ತಿತರರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಸಭಾ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುವರ್ಣಿನಿ, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಮಿತಾ ಬೆಳ್ಳಾರೆ , ನಿವೃತ್ತ ಯೋಧ ಗಿರಿಧರ ಗೌಡ ಖಡೀರ, ನಾರಾಯಣ ಕೋಡ್ಕಿಲ್ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನಾ.ಸೀತರಾಮ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವೊಳಿಕೆ,ಪ್ರಮುಖರಾದ ಪ್ರಸನ್ನ ಮಾಡ್ತಾ,ಸುಬೋದ್ ಶೆಟ್ಟಿ ಮೇನಾಲ,ದಿನೇಶ್ ಮೆದು,ಚಂದ್ರಕೋಲ್ಚಾರ್ ಸೇರಿದಂತೆ ಸಾವಿರಾರು ಹಿಂದು ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು.

ವಸಂತ ನಡುಬೈಲು ಸ್ವಾಗತಿಸಿ ,ಅನೂಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಅನೂಪ್ ಬಿಳಿಮಲೆ ವಂದಿಸಿದರು.
ಮಾರ್ಚ್ ಅಂತ್ಯದೊಳಗೆ ರಕ್ತೇಶ್ವರಿ ದೇಗುಲ ನಿರ್ಮಿಸಿ ಪ್ರತಿಷ್ಟಾ ಕಲಶೋತ್ಸವ ನಡೆಸುವ ಸಂಕಲ್ಪವನ್ನು ಕೈಗೊಂಡಿದ್ದು ಹಿಂದು ಸಮಾಜದ ಸಹಕಾರ ಅತೀ ಅಗತ್ಯವಾಗಿದೆ ಹಾಗೂ 500 ಹಿಂದುಗಳು ಹಾಗೂ 50 ಮುಸ್ಲಿಂ ಕುಟುಂಬ ಇರುವ ಈ ಗ್ರಾಮದಲ್ಲಿ ಶಾಂತಿ ಹಿಂದುಗಳ ಮಾತ್ರ ಕೆಲಸವಲ್ಲ ಮುಸ್ಲಿಂಮರು ಸ್ವಮೇದಿಯಾಗಿ ದೇವಿಯ ಸ್ಥಳವನ್ನು ಬೇಡ ಎಂದು ಅಧಿಕಾರಿಗಳಿಗೆ ತಿಳಿಸಿ ಶಾಂತಿಗೆ ಸಹಕರಿಸಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಅಲ್ಲದೇ ಪ್ರತಿಭಟನಾ ಸಭೆಗೆ ಮನವಿ ಸ್ವೀಕರಿಸಲು ತಡವಾಗಿ ಆಗಮಿಸಿದ ತಹಶಿಲ್ದಾರ್ ವಿರುದ್ದ ನೆರೆದ ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.



