ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಿ, ಹತ್ತು ಕೋಟಿಯಷ್ಟು ರೈತರಿಗಾಗಿ 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್ಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪಿಎಂ ಕಿಸಾನ್ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ 24ನೇ ಕಂತಿನ ಹಣವನ್ನು 9.34 ಕೋಟಿಗೂ ಅಧಿಕ ರೈತರಿಗೆ ನೀಡಲಾಗಿದೆ. ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಅಕೌಂಟ್ಗೆ 2,000 ರೂ ಹಣ ನೇರವಾಗಿ ಜಮೆ ಆಗಲಿದೆ. ಸರ್ಕಾರ ಈ 24ನೇ ಕಂತಿನ ಹಣ ವಿತರಣೆಗೆ 18,000 ಕೋಟಿ ರೂ ವೆಚ್ಚ ಮಾಡಿದೆ.
2018-19ರಲ್ಲಿ ಜಾರಿಗೆ ಬಂದ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಹಾಕಿರುವ ಒಟ್ಟು ಹಣವು 4.5 ಲಕ್ಷ ಕೋಟಿ ರೂಗೂ ಅಧಿಕ. ಬನಸ್ಕಾಂತ ಸಮಾವೇಶದಲ್ಲಿ ಮೋದಿ ಈ ಮಾಹಿತಿ ನೀಡಿದರು. ಹಾಗೆಯೇ, ರೈತರಿಗೆ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲು ಸರ್ಕಾರ 16 ಲಕ್ಷ ಕೋಟಿ ರೂ ವ್ಯಯಿಸಿದೆ ಎಂದೂ ಮೋದಿ ತಿಳಿಸಿದರು.
ನಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ರೈತರು ತಮ್ಮ pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಫಾರ್ಮರ್ಸ್ ಕಾರ್ನರ್‌ಗೆ ಕ್ಲಿಕ್ ಮಾಡಿ. ನಂತರ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ. ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿ. ಅದರಲ್ಲಿ ಫಲಾನುಭವಿಗಳ ಪಟ್ಟಿ ಇರುತ್ತದೆ. ಅದರಲ್ಲಿ ಹೆಸರು ಇದೆಯಾ ಎಂದು ಪರಿಶೀಲಿಸಬಹುದು.



