ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಮುನಾ ನದಿಯಲ್ಲಿ ಮುಳುಗಿ ನೀರನ್ನು ಕುಡಿದು, ಈ ನೀರು ಸ್ವಚ್ಛವಾಗಿದೆ ಎಂದು ಬಿಜೆಪಿ ಸಂಸದರೊಬ್ಬರು ಘೋಷಣೆ ಮಾಡಿದ್ದಾರೆ.
ಬಿಜೆಪಿ ಸಂಸದ ಮನೋಜ್ ತಿವಾರಿ ಗುರುವಾರ ಸೋನಿಯಾ ವಿಹಾರ್ ಘಾಟ್ನಲ್ಲಿ ನದಿಯಲ್ಲಿ ಸ್ನಾನ ಮಾಡಿದರು. ರೇಖಾ ಗುಪ್ತಾ ಅವರ ನೇತೃತ್ವದ ಸರ್ಕಾರ ಕೈಗೊಂಡ ಸ್ವಚ್ಛತಾ ಕಾರ್ಯಗಳಿಂದಾಗಿ, ಕಳೆದ ಒಂದು ವರ್ಷದಲ್ಲಿ ನದಿಯ ಮಾಲಿನ್ಯ ಮಟ್ಟವು ಅರ್ಧದಷ್ಟು ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದರು.ಬಿಜೆಪಿ ಸಂಸದ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಜನರು ಈಗ ಯಮುನಾ ನದಿಯಲ್ಲಿ ಮತ್ತೊಮ್ಮೆ ಛತ್ ಪೂಜೆಯನ್ನು ಆಚರಿಸಬಹುದು ಎಂದು ಹೇಳಿಕೆ ನೀಡಿದ್ದಾರೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತಿವಾರಿ ಅವರು, ನದಿಯ ಕೆಲವು ಭಾಗಗಳಲ್ಲಿ ವಲಸೆ ಹಕ್ಕಿಗಳು ಕಾಣಿಸಿಕೊಂಡಿರುವುದು ನದಿಯ ಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ನದಿ ಸ್ವಚ್ಛವಾಗಿಲ್ಲದಿದ್ದರೆ ಈ ಹಕ್ಕಿಗಳು ಇಲ್ಲಿಗೆ ಬರುತ್ತಿರಲಿಲ್ಲ. ಇಲ್ಲಿನ ನೀರಿನಲ್ಲಿ ಮೊಸಳೆಗಳಿರಬಹುದು, ಆದರೆ ಮೊಸಳೆಗಳು ಸ್ವಚ್ಛವಾದ ನೀರಿನಲ್ಲಿ ಮಾತ್ರ ಇರುತ್ತವೆ ಎಂದು ತಿಳಿಸಿದ್ದಾರೆ.



