January17, 2026
Saturday, January 17, 2026
spot_img

ಗದಗದಲ್ಲಿ ಕಾರಿಗೆ ಗೋವಾ ಬಸ್ ಡಿಕ್ಕಿ: ಸ್ಥಳದಲ್ಲಿ ಮೂವರು ಸಾವು

ಹೊಸ ದಿಗಂತ ವರದಿ, ಗದಗ:

ಕಾರು ಪಲ್ಟಿಯಾಗಿ ಬಸ್ ಗೆ ಡಿಕ್ಕಿಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹರ್ಲಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಜರುಗಿದೆ.

ಕೊಪ್ಪಳ ಕಡೆಯಿಂದ ಗದಗ ಕಡೆಗೆ ಕಾರು ಬರುತ್ತಿತ್ತು. ಹೊಸಪೇಟೆ ಕಡೆಗೆ ಹೊರಟಿದ್ದ ಗೋವಾ ಪಾಸಿಂಗ್ ಇರುವ ಬಸ್ ಗೆ ರೋಡ್ ಡಿವೈಡರ್ ದಾಟಿ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಹಾವೇರಿ ಮೂಲದವರೆಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್‌ ಕಂಟ್ರೋಲ್ ರೂಮ್ ನಲ್ಲಿ ಪೇದೆಯಾಗಿದ್ದ ಅರ್ಜುನ್ ನೆಲ್ಲೂರು(34) ಸಹೋದರ ಸಂಬಂಧಿ ರವಿ ನೆಲ್ಲೂರು(35) ಹಾಗೂ ಈರಣ್ಣ ಉಪ್ಪಾರ (38) ಎಂದು ಗುರುತಿಸಲಾಗಿದೆ.

ಇರುವ ಬಸ್ ಗೆ ರೋಡ್ ಡಿವೈಡರ್ ದಾಟಿ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಗದಗ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Must Read

error: Content is protected !!