July 29, 2026
Wednesday, July 29, 2026
spot_img

ಕಾರು ಓಡಿಸುವಾಗ್ಲೇ ಹೃದಯಾಘಾತವಾಗಿ ಡಿವೈಡರ್‌ಗೆ ಡಿಕ್ಕಿ: ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಪೊಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್‌ನಲ್ಲಿ ಕಾರು ಓಡಿಸುವಾಗ ಚಾಲಕನಿಗೆ ಹೃದಯಾಘಾತವಾಗಿದ್ದು, ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ತಕ್ಷಣವೇ ಪೊಲೀಸ್‌ ಸಿಬ್ಬಂದಿ ಸಿಪಿಆರ್‌ ನೀಡಿ ಪ್ರಾಣ ಉಳಿಸಿದ್ದಾರೆ.

ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಸಂಗೀತ್ ಕ್ರಾಸ್‌ರೋಡ್ಸ್‌ನಲ್ಲಿರುವ ಇಸ್ಕಾನ್ ದೇವಾಲಯದ ಬಳಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಎದೆನೋವು ಕಾಣಿಸಿದೆ.

ತಕ್ಷಣ ಕಾರು ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಲ್ಲೇ ಇದ್ದ ಸಂಚಾರಿ ಕಾನ್ಸಟೇಬಲ್‌ ಏನಾಗಿದೆ ಎಂದು ಅರ್ಥ ಮಾಡಿಕೊಂಡಿದ್ದು, ತಕ್ಷಣವೇ ಕಾರಿನ ಬಾಗಿಲುಗಳನ್ನು ತೆಗೆದು ಸಿಪಿಆರ್‌ ನೀಡಿದ್ದಾರೆ.

ಅದಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !