ಮೇಷ
ನಿಮ್ಮ ಪಾಲಿಗೆ ಸುದಿನ. ಆತ್ಮೀಯರ ಭೇಟಿ. ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಸಾಂಸಾರಿಕ ತಾಪತ್ರಯ ನಿವಾರಣೆ, ಸೌಹಾರ್ದತೆ ವೃದ್ಧಿ.
ವೃಷಭ
ನಿಮ್ಮ ಸುತ್ತಲಿನವರ ಮೆಚ್ಚುಗೆ ಪಡೆಯುವ ಕಾರ್ಯ ಮಾಡುವಿರಿ. ಯುವಕರಿಗೆ ಹೊಸ ಸ್ನೇಹ ಕುದುರಬಹುದು. ಬಂಧುತ್ವ ವೃದ್ಧಿ.
ಮಿಥುನ
ದೊಡ್ಡ ಕೆಲಸದ ಹೊಣೆ ಬೀಳಬಹುದು. ಆದರೆ ನಿಮಗದು ಕಷ್ಟವಲ್ಲ. ಆರೋಗ್ಯ ಸಮಸ್ಯೆ ಸಂಭವ. ಕುಟುಂಬದ ಕಷ್ಟಸುಖಕ್ಕೆ ಸರಿಯಾಗಿ ಸ್ಪಂದಿಸಿ.
ಕಟಕ
ಹಲವು ಸಮಸ್ಯೆ ಕಾಡಿದರೂ ಸಂಜೆ ವೇಳೆಗೆ ಎಲ್ಲವೂ ಇತ್ಯರ್ಥ. ಹಾಗಾಗಿ ತೃಪ್ತಿಕರ ದಿನ. ವಿರೋಧ ಕಟ್ಟಿಕೊಂಡವರು ಸ್ನೇಹಕ್ಕೆ ಹಾತೊರೆಯುವರು.
ಸಿಂಹ
ನಿಮ್ಮದೇ ಸರಿ ಎಂಬುದು ನಿಮ್ಮ ಧೋರಣೆ. ಆದರೆ ಅದು ಇತರರಿಗೆ ಸಮ್ಮತವಾಗದು. ಇದು ಕಲಹಕ್ಕೆ ಕಾರಣ ಆಗಬಹುದು.
ಕನ್ಯಾ
ನಿಮ್ಮ ನೈಜ ಭಾವನೆ ಅರುಹಲು ಹಿಂಜರಿಕೆ ಬೇಕಿಲ್ಲ. ಪೂರಕ ಸ್ಪಂದನೆ ದೊರಕಲಿದೆ. ಹಣದ ಒತ್ತಡ ಉಂಟಾದೀತು. ಖರ್ಚು ನಿಯಂತ್ರಿಸಿ.
ತುಲಾ
ಆಪ್ತರ ನೆರವಿಗೆ ಧಾವಿಸುವ ಮುನ್ನ ಎಚ್ಚರ ವಹಿಸಿ. ಮೋಸಕ್ಕೆ ಒಳಗಾಗದಿರಿ. ವ್ಯವಹಾರ ಒಪ್ಪಂದದಲ್ಲಿ ಎಚ್ಚರದಿಂದ ಮುಂದುವರಿಯಿರಿ.
ವೃಶ್ಚಿಕ
ಸಂಗಾತಿ ಜತೆಗೆ ವಾಗ್ವಾದ ನಡೆದೀತು. ವಿಕೋಪಕ್ಕೆ ಕೊಂಡು ಹೋಗದಿರಿ. ವೃತ್ತಿಯಲ್ಲಿ ಒತ್ತಡ. ಸಕಾಲದಲ್ಲಿ ಕಾರ್ಯ ಮುಗಿಯದು.
ಧನು
ಕ್ಷುಲ್ಲಕ ವಿಷಯಗಳ ಬಗ್ಗೆ ಚಿಂತಿಸುವುದು ಬಿಟ್ಟು ಉನ್ನತ ವಿಷಯಗಳ ಬಗ್ಗೆ ಗಮನ ಹರಿಸಿ. ಉದ್ದೇಶಿತ ಕಾರ್ಯ ಸಾಧನೆ. ಧನಪ್ರಾಪ್ತಿ.
ಮಕರ
ವ್ಯವಹಾರದಲ್ಲಿ ಲಾಭ. ಆದರೆ ಕೆಲವರ ಜತೆ ಸಂಬಂಧ ಕೆಡಬಹುದು. ನಡೆನುಡಿಯಲ್ಲಿ ಸಂಯಮ ವಹಿಸಿ. ಆರೋಗ್ಯ ಸ್ಥಿರ.
ಕುಂಭ
ಸಮಸ್ಯೆಯನ್ನು ಚಿಂತಿಸುತ್ತಾ ಕೂರಬೇಡಿ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಗಮನ ಕೊಡಿ. ಸೂಕ್ತ ನೆರವು ನಿಮಗೆ ಸಿಗಲಿದೆ.
ಮೀನ
ವ್ಯವಹಾರದಲ್ಲಿ ಹಿನ್ನಡೆ. ಆಪ್ತರಿಂದ ನಿರಾಶೆ. ದೊಡ್ಡ ಮೊತ್ತದ ವ್ಯವಹಾರಕ್ಕೆ ಈಗ ಕೈಹಾಕಬೇಡಿ. ಬಂಧುಗಳಿಂದ ನಿರಾಶೆ.
ದಿನಭವಿಷ್ಯ: ನಿಮ್ಮ ಪಾಲಿಗೆ ಸುದಿನ, ಆತ್ಮೀಯರ ಭೇಟಿ ಸಾಧ್ಯತೆ
