November 2, 2026
Monday, November 2, 2026
spot_img

ದಿನಭವಿಷ್ಯ: ಬಯಸಿದ ಉದ್ದೇಶ ನೆರವೇರಲಿದೆ, ಆರ್ಥಿಕ ಪ್ರಗತಿ ಜೊತೆ ಕೌಟುಂಬಿಕ ನೆಮ್ಮದಿ ದೊರೆಯಲಿದೆ

ಮೇಷ.
 ನೀವು ಬಯಸಿದ ಉದ್ದೇಶ ನೆರವೇರಲಿದೆ.  ವೃತ್ತಿ ಕ್ಷೇತ್ರದ ಅಸಮಾಧಾನ ಶಮನ. ಸಹೋದ್ಯೋಗಿ  ಸಹಕಾರ. ಆರ್ಥಿಕ ಪ್ರಗತಿ.  ಕೌಟುಂಬಿಕ ನೆಮ್ಮದಿ.
ವೃಷಭ
ಹರ್ಷೋಲ್ಲಾಸದ ಮನಸ್ಥಿತಿ. ಧಾರ್ಮಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿ.  ಯಾವುದೋ ವಿಚಾರದಲ್ಲಿ ಅನಿಶ್ಚಿತತೆ ಕಾಡುವುದು. ದೃಢ ನಿಲುವು ತಳೆಯಿರಿ.    
ಮಿಥುನ
ಹೊಸ  ಸವಾಲು ಎದುರಾದೀತು. ಖಾಸಗಿ ಬದುಕಿನಲ್ಲಿ ಅಪಸ್ವರ ಎದ್ದೀತು. ವಿವೇಕದ ನಡೆ ಅವಶ್ಯ. ದುಡುಕತನ ತೋರಬೇಡಿ.  
ಕಟಕ
ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕಾದ ಒತ್ತಡ. ಆದರೆ ಸಹಕಾರ ಸಿಗದು. ಹಿರಿಯರ ಜತೆ ವಾಗ್ವಾದ ಮಾಡದಿರಿ. ದಾಂಪತ್ಯ ಕಲಹ ಸಂಭವ.      
ಸಿಂಹ
ಖಾಸಗಿ ಬದುಕಿನಲ್ಲಿ ಮೂಡಿದ್ದ ಭಿನ್ನಮತ ಶಮನ. ಅದಕ್ಕೆ ನಿಮ್ಮ ಸಹಕಾರ ಅವಶ್ಯ.  ಆತ್ಮೀಯರ ವಿರೋಧ ನಿವಾರಣೆ. ಧನಪ್ರಾಪ್ತಿ.  
ಕನ್ಯಾ
ಕೌಟುಂಬಿಕ ಕೆಲಸ ಇಂದು ಮುಖ್ಯವಾಗಲಿದೆ. ಹೊಟ್ಟೆ ಕೆಡುವ ಸಂಭವ. ಆಹಾರದಲ್ಲಿ  ಹಿತಮಿತ ಸಾಧಿಸಿರಿ. ವೃತ್ತಿಯ ಒತ್ತಡ ನಿವಾರಣೆಯಾಗಲಿದೆ.    
ತುಲಾ
  ಇಂದು ಎಲ್ಲವೂ ನಿಮ್ಮ ಪರವಾಗಿ ಸಾಗಲಿದೆ.ಅಹಂ ದೂರವಿಡಿ. ವಿನಯ ಇರಲಿ.  ಉದ್ಧಟ ಧೋರಣೆ ತಳೆದರೆ ನಿಷ್ಟುರರಾಗುವಿರಿ.        
ವೃಶ್ಚಿಕ
ನೇರ ನಡೆನುಡಿ ಇಂದು ಅವಶ್ಯ. ಆಪ್ತರ ಜತೆ ಮುಚ್ಚುಮರೆ ಮಾಡದಿರಿ. ಮುಜುಗರದ ಪರಿಸ್ಥಿತಿ ಎದುರಾದಿತು. ತಾಳ್ಮೆಯ ನಡೆ ಅಗತ್ಯ.    
ಧನು
ಉದ್ದೇಶಿತ ಕಾರ್ಯ ಸಂಪೂರ್ಣ. ಹಾಗಾಗಿ ನಿರಾಳತೆ. ಉದ್ಯಮಿಗಳಿಗೆ ಧನಲಾಭ. ಖರ್ಚು ನಿಯಂತ್ರಣಕ್ಕೆ ತುಸು ಗಮನ ಕೊಡಿರಿ.    
ಮಕರ
ಆರ್ಥಿಕ ಪರಿಸ್ಥಿತಿ ಉತ್ತಮ. ಆದಾಯ ಮತ್ತು ಉಳಿತಾಯ ಹೆಚ್ಚಳ. ಆರೋಗ್ಯ ಸಮಸ್ಯೆ ಪರಿಹಾರ. ಬಂಧುಗಳಿಂದ ಉತ್ತಮ ಸಹಕಾರ.    
ಕುಂಭ
ಕೌಟುಂಬಿಕ ಉದ್ವಿಗ್ನತೆ ಉಂಟಾದರೂ ಬಳಿಕ ಶಮನ. ಹೊಂದಾಣಿಕೆ ಮುಖ್ಯ ಎಂಬುದನ್ನು ಅರಿಯಿರಿ. ಆದಾಯ ಗಳಿಕೆ ಹೆಚ್ಚಲಿದೆ.  
 ಮೀನ
ಖಾಸಗಿ ವ್ಯವಹಾರ ಸುಲಲಿತ. ಅಡ್ಡಿಗಳ ನಿವಾರಣೆ. ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಉಪಯುಕ್ತ ಕಾರ್ಯಕ್ಕೆ ಧನವ್ಯಯ.

Must Read

Skip to toolbar