ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟ, ದರ್ಶನ್ ಆಪ್ತ ಧನ್ವೀರ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾನನಷ್ಟ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮಾನನಷ್ಟು ದೂರು ದಾಖಲಿಸಿದ್ದಾರೆ. ಧನ್ವೀರ್ ನನ್ನ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ. ಅವು ಮಾಧ್ಯಮಗಳಲ್ಲಿ ಪ್ರಸಾರವಾಗಿ ನನಗೆ ಮುಜುಗರ ಉಂಟುಮಾಡಿದೆ ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಆರೋಪಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು, ಆಡಿಯೋ/ವೀಡಿಯೋ ರೆಕಾರ್ಡಿಂಗ್‌ಗಳನ್ನು ಸೂಕ್ತ ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದ್ದಾರೆ.
ನಟ ದರ್ಶನ್ ಮೊದಲು ಜೈಲಿಗೆ ಹೋದಾಗ ನಟ ಧನ್ವೀರ್ ವಿಜಯಲಕ್ಷ್ಮಿ ಅವರ ಬೆನ್ನಿಗೆ ನಿಂತಿದ್ದರು. ಕಾಲಕ್ರಮೇಣ ಇಬ್ಬರ ಮಧ್ಯೆ ಅಂತರ ಮೂಡಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಕೆಲ ದಿನಗಳ ಹಿಂದಷ್ಟೇ ಧನ್ವೀರ್, ವಿಜಯಲಕ್ಷ್ಮಿಗೆ ದರ್ಶನ್ ಜೈಲಿನಿಂದ ಹೊರಗೆ ಬರೋದು ಇಷ್ಟವಿಲ್ಲ ಎಂದು ದೂರಿದ್ದರು. ಇತ್ತ ವಿಜಯಲಕ್ಷ್ಮಿ ಕೂಡ ಧನ್ವೀರ್ ಮೋಸ ಮಾಡಿದ್ದಾರೆ ಎಂದು ದೂರಿದ್ದರು.



