ಹೊಸದಿಗಂತ ವರದಿ ಮುಂಡಗೋಡ:
ತಾಲ್ಲೂಕಿನ ಕೊಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಭತ್ತದ ಬೆಳೆಯನ್ನು ಸಂಪೂರ್ಣ ಹಾನಿಗೊಳಿಸಿರುವ ಘಟನೆ ನಡೆದಿದೆ.
ಜೋಡಿಕಟ್ಟಾ ಗ್ರಾಮದಲ್ಲಿ ರೈತ ರಾಮು ಜನ್ನ ಲಂಬೋರ ಅವರ ಭತ್ತದ ಗದ್ದೆಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ತಿಂದು, ತುಳಿದು ನಾಶಪಡಿಸಿವೆ. ಇದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದ್ದು, ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಸಂಕಷ್ಟ ಎದುರಾಗಿದೆ.
ಗದ್ದೆಗೆ ನುಗ್ಗಿದ ಕಾಡಾನೆಗಳ ಹಿಂಡು
ಜೋಡಿಕಟ್ಟಾ ಗ್ರಾಮದ ರಾಮು ಜನ್ನ ಲಂಬೋರ ಅವರು ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಬೆಳೆ ಉತ್ತಮವಾಗಿ ಬಂದಿದ್ದರಿಂದ ಫಸಲು ಕೈಗೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಕಾಡಾನೆಗಳ ಹಿಂಡು ಏಕಾಏಕಿ ಗದ್ದೆಗೆ ನುಗ್ಗಿ ಭತ್ತದ ಬೆಳೆಯನ್ನು ತಿಂದು, ತುಳಿದು ಸಂಪೂರ್ಣ ಹಾನಿಗೊಳಿಸಿದೆ. ಗದ್ದೆಯಲ್ಲಿದ್ದ ಭತ್ತದ ಪೈರುಗಳು ನೆಲಕ್ಕುರುಳಿದ್ದು, ರೈತನ ಶ್ರಮ ವ್ಯರ್ಥವಾಗಿದೆ.



