November 6, 2026
Friday, November 6, 2026
spot_img

ಏಳು ಜನರನ್ನು ಕೊಂದ ಕ್ಯಾಬ್‌ ಡ್ರೈವರ್‌: ಕೊ*ಲೆಗೆ ಅಪ್ರಾಪ್ತ ವಯಸ್ಕ ಮಗಳ ಸಾಥ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರನ್ನೇ ಬೆಚ್ಚಿಬೀಳಿಸಿರುವ ಏಳು ಜನರ ಭೀಕರ ಕೊಲೆಯ ಪ್ರಕರಣದ ನೂತನ ಅಂಶಗಳು ಬೆಳಕಿಗೆ ಬರುತ್ತಿವೆ. ಆರೋಪಿ ಕ್ಯಾಬ್‌ ಡ್ರೈವರ್‌ ಇಂದುಶೇಖರ್‌ ಕೊಲೆ ಮಾಡುವುದಕ್ಕೆ ಪಿಯುಸಿ ಓದುತ್ತಿರುವ ಮಗಳು ಸಾಥ್‌ ನೀಡಿರುವ ಶಂಕೆ ವ್ಯಕ್ತವಾಗಿದೆ.

20 ದಿನಗಳಿಂದ ಮನೆಯಲ್ಲಿ ಒಬ್ಬರ ಮೇಲೆ ಒಬ್ಬರಂತೆ ಕೊಲೆಗಳನ್ನು ಮಾಡುತ್ತಾ ಹೋದರೂ ಮಗಳು ಮೌನವಾಗಿದ್ದದ್ದು ಏಕೆ? ಮನೆಗೆ ಬರುವುದು ಹೋಗುವುದು ಎಲ್ಲವನ್ನೂ ಸಾಮಾನ್ಯವಾಗಿ ಮಾಡುತ್ತಾ ಇದ್ದ ಮಗಳ ಮೇಲೂ ಸಂಶಯ ವ್ಯಕ್ತವಾಗಿದೆ.

ಕೊಲೆಗೆ ಸಾಥ್‌ ನೀಡಿ, ಸಣ್ಣ ಪುಟ್ಟ ಸಹಾಯ ಮಾಡಿರುವ ಆರೋಪ ಎದುರಾಗಿದ್ದು, ಪ್ರಶ್ನೋತ್ತರಗಳ ನಂತರ ನಿಜವಾದ ಉತ್ತರ ಸಿಗಬೇಕಿದೆ. ಮಗಳ ಮೂಲಕ ಇಂದುಶೇಖರ ಒಬ್ಬೊಬ್ಬರನ್ನೇ ಮನೆಗೆ ಕರೆಸುತ್ತಿದ್ದ. ನಂತರ ಕೊ*ಲೆ ಮಾಡಿ ಮೃತದೇಹವನ್ನು ಎಸೆಯುತ್ತಿದ್ದ ಎಂದು ಹೇಳಲಾಗಿದೆ.

ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ಕಾಣೆಯಾಗುತ್ತಿದ್ದಂತೆಯೇ ಪೊಲೀಸರು ಮೊಬೈಲ್‌ ಟ್ರೇಸ್‌ ಮಾಡಿದ್ದಾರೆ. ಎಲ್ಲರೂ ಇಂದುಶೇಖರ ಮನೆಯಲ್ಲಿಯೇ ಇದ್ದಾರೆ ಎನ್ನುವಂತೆ ಲೊಕೇಷನ್‌ ಟ್ರ್ಯಾಕ್‌ ಆಗಿದೆ. ತದನಂತರ ವಿಚಾರಣೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಈತ ಪತ್ರಿಕೋದ್ಯಮ ವಿದ್ಯಾಭ್ಯಾಸ ಮಾಡಿದ್ದು, ಕೆಲಕಾಲ ಪತ್ರಕರ್ತನಾಗಿಯೂ ಕೆಲಸ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

Must Read